
ಪ್ರಾಣಿಗಳನ್ನು ವ#ಧೆ ಮಾಡಿ ಅಂಗಡಿಗಳಲ್ಲಿ ನೇತು ಹಾಕುವ ಕ್ರಮ ಸರಿಯಲ್ಲ; ಇದು ಮಕ್ಕಳಲ್ಲಿ ಹಿಂ#ಸಾತ್ಮಕ ಮನೋಭಾವನೆ ಬೆಳೆಸುತ್ತದೆ:ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
Wednesday, January 11, 2023
ಉಡುಪಿ(Headlineskannada): ಪ್ರಾಣಿಗಳನ್ನು ವ#ಧೆ ಮಾಡಿ ಅಂಗಡಿಗಳಲ್ಲಿ ನೇತು ಹಾಕುವ ಕ್ರಮ ಸರಿಯಲ್ಲ. ಇದು ಮಕ್ಕಳಲ್ಲಿ ಹಿಂ#ಸಾತ್ಮಕ ಮನೋಭಾವನೆ ಬೆಳೆಯಲು ಕಾರಣವಾಗುತ್ತದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯ ಪೇಜಾವರ ಮಠದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, . ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಅವರ ಮನಸ್ಸನ್ನು ಬಾಲ್ಯದಲ್ಲೇ ಹಿಂ#ಸೆಯಿಂದ ದೂರ ಇರುವಂತೆ ನೋಡಿಕೊಳ್ಳಬೇಕು ಎಂದರು.
ಟಿವಿ ಮತ್ತಿತರ ಮಾಧ್ಯಮಗಳಲ್ಲಿ ಬರುವ ಹಿಂ#ಸೆಯಿಂದಲೂ ಮಕ್ಕಳನ್ನು ದೂರ ಇರುವಂತೆ ಪೋಷಕರು ಮತ್ತು ಶಿಕ್ಷಕರು ನೋಡಿಕೊಳ್ಳಬೇಕು ಎಂದವರು ಹೇಳಿದರು.