
ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟ್ ನ ವತಿಯಿಂದ ಶ್ವಾನ ಮರಿಗಳ ಉಚಿತ ದತ್ತು ಸ್ವೀಕಾರ
Wednesday, January 11, 2023
ಮಲ್ಪೆ: ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟ್ ನ ವತಿಯಿಂದ ಶ್ವಾನ ಮರಿಗಳ ಉಚಿತ ದತ್ತು ಸ್ವೀಕಾರ ಕಾರ್ಯಕ್ರಮವನ್ನು ಮಲ್ಪೆಯ ಬೀಚ್ ನಲ್ಲಿ ಆಯೋಜಿಸಲಾಗಿತ್ತು.
ಉಚಿತ ಶ್ವಾನಗಳ ದತ್ತು ಸ್ವೀಕಾರದ ಸುದ್ದಿ ತಿಳಿದು ಸಾಕಷ್ಟು ಸಂಖ್ಯೆಯಲ್ಲಿ ಶ್ವಾನಪ್ರೇಮಿಗಳು ಮಲ್ಪೆ ಕಡಲಕಿನಾರೆ ಸೇರಿದ್ದರು. ತಮಗೆ ಇಷ್ಟವಾದ ಶ್ವಾನಗಳನ್ನು ದತ್ತು ಮೂಲಕ ಪಡೆದುಕೊಂಡು ಸಂಭ್ರಮಿಸಿದರು.
ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟ್ ಹಲವಾರು ವರ್ಷಗಳಿಂದ ಬೀದಿ ಬದಿಯಲ್ಲಿ ಅಪಾಯದಲ್ಲಿರುವ ಶ್ವಾನಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ. ರಕ್ಷಿಸಲ್ಪಡುವ ಶ್ವಾನಗಳಿಗೆ ಚಿಕಿತ್ಸೆ ಕೊಟ್ಟು, ಆರೈಕೆ ಮಾಡಲಾಗುತ್ತದೆ. ಅವು ಸಂಪೂರ್ಣ ಗುಣಮುಖವಾದ ಬಳಿಕ ಇಂತಹ ದತ್ತು ಸ್ವೀಕಾರ ಕಾರ್ಯಕ್ರಮ ನಡೆಸಿ ಶ್ವಾನಗಳು ಅಗತ್ಯ ಇರುವ ಮಾಲೀಕರಿಗೆ ಒಪ್ಪಿಸಲಾಗುತ್ತದೆ. ಟ್ರಸ್ಟ್ ನ ಬಬಿತಾ ಮದ್ವರಾಜ್ ಅವರು ಈ ಕಾರ್ಯವನ್ನು ಆಯೋಜಿಸುತ್ತಾ ಬರುತ್ತಿದ್ದಾರೆ. ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.