
ಬೈಂದೂರು ಹೇರೂರುನಲ್ಲಿ ಹೊ#ಡೆದಾಡಿಕೊಂಡ ಐವರು ಯುವಕರು ಪೊಲೀಸರ ವಶಕ್ಕೆ
Wednesday, January 18, 2023
ಬೈಂದೂರು (Headlineskannada): ಬೈಂದೂರು ತಾಲೂಕಿನ ಹೇರೂರು ಗ್ರಾಮದ ಯರುಕೋಣೆ ಸೋಲಾರ್ ಸರ್ಕಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಹೊ#ಡೆದಾಡಿಕೊಂಡು ಗ#ಲಾಟೆ ಮಾಡುತ್ತಿದ್ದ 5 ಮಂದಿ ಯುವಕರನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೇರೂರು ಗ್ರಾಮದ ರಾಜೇಶ (25), ಕಿರಿಮಂಜೇಶ್ವರ ಗ್ರಾಮದ ಅಭಿಷೇಕ (20), ಚೇತನ (19), ಕಂಬದಕೋಣೆ ಗ್ರಾಮದ ಸುನೀಲ್ (20), ಕಾಲೋಡು ಗ್ರಾಮದ ಲಕ್ಷ್ಮೀಕಾಂತ (25) ಪೊಲೀಸರು ವಶಕ್ಕೆ ಪಡೆದ ಯುವಕರು.
ಆರೋಪಿಗಳು ಜ.17 ರಂದು ಮಧ್ಯಾಹ್ನದ ವೇಳೆ ಯರುಕೋಣೆ ಸೋಲಾರ್ ಸರ್ಕಲ್ ಬಳಿ ಪರಸ್ಪರ ಹೊ#ಡೆದಾಡಿಕೊಂಡು, ಗ#ಲಾಟೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾ#ಳಿ ನಡೆಸಿದ ಪೊಲೀಸರು, ಐವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.