
ಕೋಳಿಗಳನ್ನು ಬಂಧಿಸಿ ತಂದು ಠಾಣೆಯ ಸೆಲ್'ನೊಳಗೆ ಹಾಕಿದ ಪೊಲೀಸರು! ಈ ವಿಚಿತ್ರ ಘಟನೆ ನಡೆದದ್ದು ಹೇಗೆ ಗೊತ್ತೇ...?
Wednesday, January 18, 2023
ಕೊಪ್ಪಳ: ಕೋಳಿ ಕಾಳಗ-ಜೂಜು ಅ#ಡ್ಡೆಯೊಂದರ ಮೇಲೆ ದಾ#ಳಿ ನಡೆಸಿರುವ ಪೋಲೀಸರ ಕೈಗೆ ಜೂಜಾಟ ಆಡುತ್ತಿದ್ದವರು ಸಿಗದ ಕಾರಣ ಅಲ್ಲಿದ್ದ ಕೋಳಿಗಳನ್ನು ಬಂಧಿಸಿ ತಂದು ಠಾಣೆಯ ಸೆಲ್'ನೊಳಗೆ ಹಾಕಿಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಸಂಕ್ರಮಣ ಹಿನ್ನೆಲೆಯಲ್ಲಿ ಕೊಪ್ಪಳದ ಕಾರಟಗಿ ತಾಲೂಕಿನ ಪನ್ನಾಪುರ ಹತ್ತಿರದ ಬಸವಣ್ಣ ಕ್ಯಾಂಪ್‍ನಲ್ಲಿ ಮಂಗಳವಾರ ಕೋಳಿ ಕಾಳಗ ಆಯೋಜಿಸಲಾಗಿತ್ತು. ಇಲ್ಲಿ ಸಂಜೆ ಜೂ#ಜಾಟ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ದಾ#ಳಿ ಮಾಡಿರುವ ಪೊಲೀಸರಿಗೆ ಯಾವೊಬ್ಬ ಗ್ಯಾಂ#ಬ್ಲರ್ ಅನ್ನು ಬಂಧಿಸಲಿಲ್ಲ. ಬದಲಾಗಿ ಅಲ್ಲಿದ್ದ ಹುಂಜಗಳು ಸಿಕ್ಕಿದ್ದು, ಜೊತೆಗೆ ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ವೇ ದಾ#ಳಿಯ ವೇಳೆ ಸಿಕ್ಕಿರುವ ಹುಂಜಗಳನ್ನು ಹಿಡಿದುಕೊಂಡು ಬಂದಿರುವ ಪೊಲೀಸರು ಠಾಣೆಯ ಸೆಲ್‌ನಲ್ಲಿ ಇಟ್ಟಿದ್ದಾರೆ. ಆದರೆ ದಾ#ಳಿ ವೇಳೆ ಜೂ#ಜುಕೋರರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಸಬೂಬು ನೀಡಿದ್ದಾರೆ.