ಅನ್ಯ ಧರ್ಮದವಳೆಂಬ ಕಾರಣಕ್ಕೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ; ಬೇಸರ ಹಂಚಿಕೊಂಡ 'ಹೆಬ್ಬುಲಿ' ನಟಿ ಹೇಳಿದ್ದೇನು..?

ಅನ್ಯ ಧರ್ಮದವಳೆಂಬ ಕಾರಣಕ್ಕೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ; ಬೇಸರ ಹಂಚಿಕೊಂಡ 'ಹೆಬ್ಬುಲಿ' ನಟಿ ಹೇಳಿದ್ದೇನು..?ಕೊಚ್ಚಿ: ಜನಪ್ರಿಯ ಬಹುಭಾಷಾ ನಟಿ ಅಮಲಾ ಪೌಲ್ ಅವರನ್ನು ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸಿರುವ ಘಟನೆ ನಡೆದಿದೆ.

ನಟಿ ಅಮಲಾ ಪೌಲ್ ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇವಸ್ಥಾನಕ್ಕೆ ಭೇಟಿ ಕೊಟ್ಟ ವೇಳೆ ತನಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ಅಮಲಾ ಪೌಲ್ ಕ್ರಿಶ್ಚಿಯನ್ ಧರ್ಮದವರು ಆಗಿರುವ ಕಾರಣ ದೇವಸ್ಥಾನದ ಒಳಗೆ ಪ್ರವೇಶಕ್ಕೆ ನಿರಾಕರಿಸಲಾಗಿದೆ. ದೇವಸ್ಥಾನದ ಬಾಗಿಲಲ್ಲೇ ನಟಿಗೆ ಅ#ವಮಾನ ಮಾಡಲಾಗಿದ್ದು, ಈ ವೇಳೆ ದೇವಸ್ಥಾನಕ್ಕೆ ಪ್ರವೇಶ ನೀಡಲು ಅಲ್ಲಿನ ಆಡಳಿತ ಮಂಡಳಿಯವರು ನಿರಾಕರಿಸಿದ್ದರು. ದೇವಸ್ಥಾನದ ಒಳಗಡೆ ಬರಬೇಡಿ, ಹೊರಗಡೆಯೇ ದೇವರ ದರ್ಶನ ಪಡೆದು ಹೋಗಿ ಎಂದಿದ್ದರು.

ಈ ದೇವಾಲಯದ ಒಳಗೆ ಪ್ರವೇಶಿಸಲು ಹಿಂದೂ ಧರ್ಮದವರಿಗೆ ಮಾತ್ರ ಅವಕಾಶವಿದೆ ಎಂದು ಅಲ್ಲಿದ್ದ ಆಡಳಿತ ಮಂಡಳಿಯವರು ಪ್ರವೇಶ ನಿರಾಕರಿಸಿದ್ದಾರೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ. 

ತಮಗಾದ ಬೇಸರ, ಅನುಭವವನ್ನು ಅಮಲಾ ಪೌಲ್ ದೇವಸ್ಥಾನದ ನೋಂದಣಿ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ. 2023ರಲ್ಲೂ ಇಂಥ ಧಾರ್ಮಿಕ ತಾರತಮ್ಯ ಇನ್ನೂ ಅಸ್ತಿತ್ವದಲ್ಲಿದೆ ಎನ್ನುವುದು ದುಃಖಕರ ಮತ್ತು ನಿರಾಶಾದಾಯಕವಾಗಿದ್ದು, ಇಂಥ ಧಾರ್ಮಿಕ ತಾರತಮ್ಯ ನಡೆಯುತ್ತಿದೆ ಎಂದು ನನಗೆ ನಂಬಲು ಸಾಧ್ಯವಿಲ್ಲ. ಈ ತಾರತಮ್ಯ ಶಾಶ್ವತವಾಗಿ ತೊಲಗಲಿ ಎಂದು ತಾನು ಬಯಸುತ್ತಿದ್ದೇನೆ ಎಂದು ಅಮಲಾ ಪೌಲ್ ಹೇಳಿದ್ದಾರೆ. 

ನಟಿ ಅಮಲಾ ಪೌಲ್ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಸುದೀಪ್‌ ಜೊತೆ 'ಹೆಬ್ಬುಲಿ' ಚಿತ್ರದಲ್ಲಿ ನಟಿಸಿದ್ದಾರೆ.

Ads on article

Advertise in articles 1

advertising articles 2

Advertise under the article