ಬೆಳಗಾವಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಗುಂ#ಡಿನ ದಾ#ಳಿ; ಮೂವರು ಆರೋಪಿಗಳ ಬಂಧನ: ದಾ#ಳಿಗೆ ಕಾರಣ ಬಿಚ್ಚಿಟ್ಟ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ
ಬೆಳಗಾವಿ: ಬೆಳಗಾವಿ ಜಿಲ್ಲೆ ಶ್ರೀರಾಮಸೇನೆ ಅಧ್ಯಕ್ಷ ರವಿ ಕೋಕಿತ್ಕರ್ ಹಾಗೂ ಹಿಂದೂ ರಾಷ್ಟ್ರ ಸೇನಾ ಮುಖಂಡ ಮನೋಜ್ ದೇಸೂರಕರ್ ಮೇಲೆ ನಡೆದ ಗುಂ#ಡಿನ ದಾ#ಳಿ ಪ್ರಕರಣಕ್ಕೆ ಸಂಬಂಧಿಸಿ 18 ಗಂಟೆಯೊಳಗೆ ಮೂರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿ ಕ್ಯಾಂಪ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಪಾಟೀಲ ಮಾಳದ ನಿವಾಸಿ ಅಭಿಜಿತ ಸೋಮನಾಥ ಭಾತಖಾಂಡೆ(41), ತಾಲ್ಲೂಕಿನ ಬಸ್ತವಾಡದ ರಾಹುಲ್ ನಿಂಗಾಣಿ ಕೊಡಚವಾಡ(32) ಹಾಗು ಜ್ಯೋತಿಬಾ ಗಂಗಾರಾಮ ಮುತಗೇಕರ್(25) ಬಂಧಿತರು.
ಗುಂ#ಡಿನ ದಾ#ಳಿ ನಡೆಸಿದ ಅಭಿಜಿತ ಹಾಗೂ ರವಿ ಮಧ್ಯೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಮನಸ್ತಾಪ ಉಂಟಾಗಿತ್ತು. ಇವರಿಬ್ಬರ ಮಧ್ಯೆ ಹಣಕಾಸಿನ ವ್ಯವಹಾರ ಹಾಗೂ ವೈಯಕ್ತಿಕ ದ್ವೇ#ಷವೇ ಈ ಘಟನೆಗೆ ಕಾರಣವಾಗಿದ್ದು, 18 ಗಂಟೆಯೊಳಗೆ ಪೊಲೀಸರು ಪ್ರಕರಣ ಬೇಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರವಿ ಹಾಗು ಮನೋಜ್ ಮೇಲೆ ನಿನ್ನೆ ರಾತ್ರಿ ಬೈಕ್ನಲ್ಲಿ ಬಂದು ಗುಂ#ಡಿನ ದಾ#ಳಿ ನಡೆಸಿ ಪರಾರಿಯಾಗಿದ್ದರು. ಅಭಿಜಿತ್ ಹಾಗು ರವಿ ನಡುವೆ ಹಣಕಾಸಿನ ವ್ಯವಹಾರ, ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದರು. 2020ರ ಜ.1ರಂದು ಅಭಿಜಿತ್ ಮೇಲೆ ಹ#ಲ್ಲೆಯೊಂದು ನಡೆದಿತ್ತು. ಈ ಹ#ಲ್ಲೆಗೆ ರವಿ ಕೋಕಿತಕರ್ ಪ್ರಮುಖ ಆರೋಪಿಯಾಗಿದ್ದ. ಈ ವೈಯಕ್ತಿಕ ದ್ವೇ#ಷ ಹಿನ್ನೆಲೆ ನಿನ್ನೆ ಈ ಘಟನೆ ನಡೆದಿದೆ ಎಂದು ಮಾಹಿತಿ ನೀಡಿದರು.
ಆರೋಪಿಗಳ ಬಂಧನಕ್ಕೆ ನಾಲ್ಕು ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. 4 ಪ್ರತ್ಯೇಕ ತಂಡ ರಚನೆ ಮಾಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿತ್ತು. 1ತಂಡ ಗೋವಾ, ಮತ್ತೊಂದು ತಂಡ ಮಹಾರಾಷ್ಟ್ರಕ್ಕೆ ತೆರಳಿ ತೀವ್ರ ಶೋಧ ನಡೆಸಿತ್ತು.ಇನ್ನುಳಿದು ಮತ್ತೆರಡು ತಂಡಗಳು ಜಿಲ್ಲೆಯಲ್ಲಿ ಶೋಧ ಕಾರ್ಯ ನಡೆಸಿತ್ತು ಎಂದು ಅವರು ತಿಳಿಸಿದರು.