ಸಾವಿರಾರು ಜನರ ಸಮ್ಮುಖದಲ್ಲಿ ಸೂರಲ್ಪಾಡಿಯಲ್ಲಿ ನಡೆದ ನೌಶಾದ್ ಹಾಜಿ ಅಂ#ತ್ಯಸಂ#ಸ್ಕಾರ; ಮುಗಿಲು ಮುಟ್ಟಿದ ಆಕ್ರಂದನ
ಮಂಗಳೂರು (Headlines Kannada): ಬೆಳ್ತಂಗಡಿ ಸಮೀಪದ ಗುರುವಾಯನಕೆರೆ ವೇಣೂರು ರಸ್ತೆಯ ಗರ್ಡಾಡಿ ಬಳಿ ನಡೆದ ಅ#ಪಘಾತದಲ್ಲಿ ಮೃ#ತರಾದ ಧಾರ್ಮಿಕ, ಸಾಮಾಜಿಕ ಮುಂದಾಳು ನೌಶಾದ್ ಹಾಜಿ ಸೂರಲ್ಪಾಡಿ ಅವರ ಅಂ#ತ್ಯಸಂ#ಸ್ಕಾರ ಸೂರಲ್ಪಾಡಿಯಲ್ಲಿ ರವಿವಾರ ರಾತ್ರಿ ನಡೆಯಿತು.
ಬೆಳ್ತಂಗಡಿ ಕಡೆ ಹೋಗುತ್ತಿದ್ದ ಕಾರಿಗೆ ಖಾಸಗಿ ಬಸ್ ಮುಖಾಮುಖಿ ಡಿ#ಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನೌಶಾದ್ ಹಾಜಿ ಸೂರಲ್ಪಾಡಿ ಹಾಗು ಅವರ ಕಾರು ಚಾಲಕ ಉಳಾಯಿಬೆಟ್ಟು ನಿವಾಸಿ ಮುಷರಫ್ ಸ್ಥಳದಲ್ಲಿಯೇ ಸಾ#ವನ್ನಪ್ಪಿದ್ದರು.
ಈ ಅ#ಪಘಾತದಲ್ಲಿ ನೌಶಾದ್ ಹಾಜಿ ಸೂರಲ್ಪಾಡಿ ಅವರಿದ್ದ ಕಾರು ಸಂಪೂರ್ಣ ನು#ಜ್ಜುಗುಜ್ಜಾಗಿದ್ದು, ಮೃ#ತದೇಹವನ್ನು ಕಾರಿನಿಂದ ಹೊ#ರತೆಗೆಯಲು ಸ್ಥಳೀಯರು ಅರಸಾಹಸ ಪಡಬೇಕಾಯಿತು.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಮ#ರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃ#ತದೇಹವನ್ನು ಬೆಳ್ತಂಗಡಿಯ ದಾರುಸ್ಸಲಾಂ ಶಿಕ್ಷಣ ಸಂಸ್ಥೆಗೆ ಕೊಂಡೊಯ್ದು ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸೂರಲ್ಪಾಡಿಯಲ್ಲಿ ನೌಶಾದ್ ಹಾಜಿಯವರ ಅಂ#ತಿಮ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಪರಿಸರದಲ್ಲಿ 1 ಕಿ.ಮೀ. ವರೆಗೂ ಜನಸಂದಣಿಯಿತ್ತು. ಈ ವೇಳೆ ಟ್ರಾಫಿಕ್ ನಿಯಂತ್ರಿಸುವಲ್ಲಿ ಪೊಲೀಸರೊಂದಿಗೆ SKSSFನ ಕಾರ್ಯಕರ್ತರು ಸಹಕರಿಸಿದರು.
ಅಂ#ತಿಮ ದರ್ಶನಕ್ಕೆ ಸೇರಿದ್ದ ಸಾವಿರಾರು ಜನ
ಅ#ಪಘಾತ ನಡೆದ ವಿಷಯ ತಿಳಿಯುತ್ತಿದ್ದಂತೆ ನೌಶಾದ್ ಹಾಜಿ ಅವರ ಮನೆಯ ಮುಂದೆ ಸಾರ್ವಜನಿಕರು ಜಮಾಯಿಸಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ನೌಶಾದ್ ಹಾಜಿ ಅವರ ಸಾವಿನ ಸುದ್ದಿ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಜನರಿಗೆ ಭರಸಿಡಿಲೆರಗಿದಂತಾಗಿದೆ.
ಮ#ರಣೋತ್ತರ ಪರೀಕ್ಷೆಯ ಬಳಿಕ ಮೃ#ತದೇಹವನ್ನು ಬೆಳ್ತಂಗಡಿಯಿಂದ ಸೂರಲ್ಪಾಡಿಯ ಅವರ ನಿವಾಸಕ್ಕೆ ತರಲಾಯಿತು. ಕುಟುಂಬಸ್ಥರಿಗೆ ತೋರಿಸಿದ ಬಳಿಕ ಬಳಿಕ ಮೃ#ತದೇಹವನ್ನು ಸೂರಲ್ಪಾಡಿ ಜುಮ್ಮಾ ಮಸೀದಿಯಲ್ಲಿ ಸಾರ್ವಜನಿಕರ ದರ್ಶನಕ್ಕಿಡಲಾಯಿತು.
ಸೂರಲ್ಪಾಡಿ ಜುಮ್ಮಾ ಮಸೀದಿಯಲ್ಲಿ ದ#ಫನ
ಈ ವೇಳೆ ನೌಶಾದ್ ಹಾಜಿ ಅವರ ಮ#ಯ್ಯತ್ ನೋಡುವುದಕ್ಕೆ ಜನ ಕೇರಳ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ತಂಡೋಪತಂಡವಾಗಿ ಬರ ತೊಡಗಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ, ಅವರ ಹಿತೈಷಿಗಳು, ಬಂಧು ಮಿತ್ರರು, ಕುಟುಂಬಸ್ಥರು, ಗಣ್ಯರು ಅಂ#ತಿಮದರ್ಶನ ಪಡೆದು ಅಗಲಿದ ಮುಖಂಡನಿಗೆ ಸಂತಾಪ ಸೂಚಿಸಿದರು. ಬಳಿಕ ಸೂರಲ್ಪಾಡಿಯ ಜುಮ್ಮಾ ಮಸೀದಿಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ದ#ಫನ ಮಾಡಲಾಯಿತು.
ಮುಗಿಲು ಮುಟ್ಟಿದ ಆಕ್ರಂದನ
ನೌಶಾದ್ ಹಾಜಿ ಸೂರಲ್ಪಾಡಿ ಅವರ ಮ#ರಣ ವಾರ್ತೆ ಹಬ್ಬುತ್ತಿದ್ದಂತೆಯೇ ಅವರ ಮನೆಯ ಸುತ್ತಮುತ್ತ ಪರಿಸರದಲ್ಲಿ ಜಾತಿ, ಮತ ಮರೆತು ಸಾವಿರಾರು ಮಂದಿ ಜಮಾಯಿಸಿದ್ದರು. ಮೃ#ತದೇಹ ಸೂರಲ್ಪಾಡಿಗೆ ಬರುತ್ತಿದ್ದಂತೆಯೇ ಜನರನ್ನು ನಿಯಂತ್ರಿಸಲು ಅರಸಾಹಸ ಪಡಬೇಕಾಯಿತು. ಪ್ರತಿಯೊಬ್ಬರ ಮುಖದಲ್ಲಿ ದುಃಖ ಮಡುಗಟ್ಟಿತ್ತು. ಕುಟುಂಬದವರ ಆಕ್ರಂದನ ಈ ವೇಳೆ ಮುಗಿಲುಮುಟ್ಟಿತ್ತು. ಈ ವೇಳೆ ಅಲ್ಲಿದ್ದ ಜನ ಕಣ್ಣೀರು ಸುರಿಸುತ್ತಿರುವ ದೃಶ್ಯ ಕಂಡು ಬಂದವು.
ಅಂ#ತಿಮ ದರ್ಶನ ಪಡೆದ ಗಣ್ಯರು
ಮೃ#ತದೇಹವನ್ನು ಬೆಳ್ತಂಗಡಿಯಿಂದ ತರುವ ವೇಳೆ ಅಲ್ಲಿಗೆ ಆಗಮಿಸಿದ ಬೆಳ್ತಂಗಡಿಯ ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ರಕ್ಷಿತ್ ಶಿವರಾಂ ಆಗಮಿಸಿ ಅಂತಿಮ ದರ್ಶನ ಪಡೆದರು. ಸೂರಲ್ಪಾಡಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ, ಮಾಜಿ ಶಾಸಕ ಮೊಯಿದಿನ್ ಬಾವ, ಜೆಡಿಎಸ್ ನಾಯಕ ಬಿ.ಎಂ.ಫಾರೂಕ್, ಮಂಗಳೂರಿನ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್, ಝಯಿನುಲ್ ಆಬೀದ್ ಜಿಫ್ರಿ ತಂಗಳ್, ಅಬ್ದುಲ್ ಖಾದರ್ ಬಾಮ್ರಾನ್ ಉಸ್ತಾದ್, ಉಸ್ಮಾನ್ ಫೈಝಿ ತೋಡಾರ್, ಹೈದರ್ ದಾರಿಮಿ, ಇರ್ಷಾದ್ ದಾರಿಮಿ, ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ನಾಸೀರ್, ಶಿಕ್ಷಣ ತಜ್ಞ, ಸಾಮಾಜಿಕ ಕಾರ್ಯಕರ್ತ ರಫೀಕ್ ಮಾಸ್ಟರ್, ಮಾಜಿ ಮೇಯರ್ ಅಶ್ರಫ್, ಉದ್ಯಮಿ ಝಕಾರಿಯಾ ಜೋಕಟ್ಟೆ, ಡೆಕ್ಕನ್ ಅಸ್ಗರ್ ಹಾಜಿ, ಬಷೀರ್ ಹಾಜಿ, ಮುಮ್ತಾಜ್ ಅಲಿ, ರಶೀದ್ ಹಾಜಿ, ಆಝದ್ ಮನ್ಸೂರ್, ಉದ್ಯಮಿ ಸಿತಾರ್ ಮಜೀದ್ ಹಾಜಿ ಸೇರಿದಂತೆ ಹಲವು ಗಣ್ಯರು ಮೃ#ತದೇಹದ ಅಂತಿಮ ದರ್ಶನವನ್ನು ಪಡೆದರು.
ಸಾವಿರಾರು ಮಂದಿ ಬಡವರ ಕಷ್ಟಕ್ಕೆ ನೆರಳಾಗಿದ್ದರು
ಮದ್ರಸ ಮ್ಯಾನೇಜ್ಮೆಂಟ್'ನ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದ ನೌಶಾದ್ ಹಾಜಿ ಸೂರಲ್ಪಾಡಿ, ನೇಶನಲ್ ಮಿಷನ್ ಇದರ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿಯು, ಜೊತೆಗೆ ನೂರಕ್ಕೂ ಅಧಿಕ ಸಂಘ-ಸಂಸ್ಥೆಗಳಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದರು.
ಇವರ ನೇತೃತ್ವದಲ್ಲಿ 500ಕ್ಕೂ ಅಧಿಕ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹವನ್ನು ನೆರವೇರಿದ್ದರು. ಜೊತೆಗೆ ನಂಡೆ ಪೆಂಙಳ್ ಅಭಿಯಾನದ ಸ್ಥಾಪಕಾಧ್ಯಕ್ಷರಾಗಿಯು ಕ್ರೀಯಾಶೀಲಾರಾಗಿದ್ದು, ಸಾವಿರಾರು ಮಂದಿ ಬಡವರ ಕಷ್ಟಕ್ಕೆ ನೆರಳಾಗಿದ್ದರು.