ಮತ್ತೆ ಬಂದಿದೆ ಹೊಸ ವರುಷ...ಅರಳಲಿ ಎಲ್ಲರ ಬಾಳಲಿ ಹರುಷ

ಮತ್ತೆ ಬಂದಿದೆ ಹೊಸ ವರುಷ...ಅರಳಲಿ ಎಲ್ಲರ ಬಾಳಲಿ ಹರುಷ

 

ಮನಸ್ಸಿನ ಕೊಳಕುಗಳು
ಸ್ವಚ್ಛಗೊಳ್ಳಲಿ, ಹಸಿರಾಗಲಿ,
ಸಂಕುಚಿತತೆಯ ಪೊರೆ ಕಳಚಲಿ,
ಒಲವ ಧಾರೆಯಲಿ ನಂದಿ
ಹೋಗಲಿ ದ್ವೇಷದ ಕಿಡಿ.
ಪ್ರೀತಿಯ ಹಣತೆಯ ಬೆಳಕಿನ
ಕರಗಲಿ ಮೌಢ್ಯದ ಕತ್ತಲು.
ಅರಳಲಿ ಮೊಗದಲಿ
ಮುಗುಳು ನಗೆಯ ಸುಂದರ ಹೂವುಗಳ ರಾಶಿ,
ಬೆಳಗಲಿ ಕಂಗಳಲಿ
ಭರವಸೆಯ ಹೊಸ ಬೆಳಕು.
ಹಿರಿಯರು ಬಿತ್ತಿದೆ ಮೌಲ್ಯಗಳ
ಹೆಕ್ಕುತ್ತಾ,  ಹೊಸ ಬದುಕ
ನಾವು ಕಟ್ಟೋಣ.
ಕಾಲ ಬದಲಾಗದು,ಜೀವನ ಮೌಲ್ಯ
ಬದಲಾಗುವುದೇ..ಇಲ್ಲ!
ಬದಲಾದದ್ದು..  ನಾವು ಜನರು,
ಬದಲಾವಣೆ.. ಬದುಕ ನಿಯಮ
ನಿಂತ ನೀರಾಗುವುದೇ?ಬೇಡ,
ಬದಲಾಗೋಣ..ನಾವು..
ಮೌಲ್ಯಗಳ ಕೆಡವದೆ..ಜನರ ನಡುವೆ ಗೋಡೆಗಳ ಕಟ್ಟದೆ ,ಬದಲಾಗೋಣ
ಮನುಜ ಪ್ರೇಮದ ಸೇತುವೆಯಾಗಿ.
ಹೊಸ ವರುಷಕ್ಕೆ ಇದೇ ಸರ್ವರ
ಪ್ರತಿಜ್ಞೆ ಯಾಗಲಿ...ಬಹುತ್ವಭಾರತ
ನೆಮ್ಮದಿಯಿಂದ ಉಸಿರಾಡಲಿ.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು😍😍🌷

ಉಷಾ.ಎಂ

Ads on article

Advertise in articles 1

advertising articles 2

Advertise under the article