
ಭಟ್ಕಳದಲ್ಲಿ ಬಾಂ#ಬ್ ಸ್ಫೋ#ಟಿಸುವುದಾಗಿ ಪೊಲೀಸ್ ಠಾಣೆಗೆ ಬೆ#ದರಿಕೆ ಪತ್ರ ಬರೆದಿದ್ದ ಆರೋಪಿ ಬಂಧನ
ಭಟ್ಕಳ (Headlines Kannada): ಭಟ್ಕಳದಲ್ಲಿ ಬಾಂ#ಬ್ ಸ್ಫೋ#ಟಿಸುವುದಾಗಿ ಬೆ#ದರಿಕೆ ಪತ್ರವೊಂದನ್ನು ಭಟ್ಕಳ ಶಹರ ಠಾಣೆಗೆ ರವಾನಿಸಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿದ್ದಾರೆ.
ಹನುಮಂತಪ್ಪ ಬಂಧಿತ ಆರೋಪಿಯಾಗಿದ್ದು, ಈತನನ್ನು ಚೆನ್ನೆ ಪೊಲೀಸರು ಬಂಧಿಸಿದ್ದಾರೆ. ಹನುಮಂತಪ್ಪ ಹೊಸಪೇಟೆ ನಿವಾಸಿಯಾಗಿದ್ದು, ತಾನು ಬಾಂ#ಬ್ ಸ್ಫೋ#ಟ ನಡೆಸುವುದಾಗಿ ಭಟ್ಕಳ ಶಹರ ಠಾಣೆಗೆ ಬೆ#ದರಿಕೆ ಪತ್ರವೊಂದನ್ನು ರವಾನಿಸಿದ್ದ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸ್ಫೋ#ಟ ನಡೆಸುವುದಾಗಿ ಪತ್ರ ಬರೆದಿದ್ದ. ಪತ್ರದಲ್ಲಿ “ನೆ#ಕ್ಸ್ಟ್ ಟಾ#ರ್ಗೆಟ್ ಡಿಸೆಂಬರ್ 25 & ಹ್ಯಾಪಿ ನ್ಯೂ ಇಯರ್ 2023” ಎಂದು ಉರ್ದು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಬರೆದ ಪೋಸ್ಟ್ ಕಾರ್ಡ್‌ವೊಂದು ಭಟ್ಕಳ ಠಾಣೆಗೆ ಆರೋಪಿ ರವಾನಿಸಿದ್ದ. ಈ ಬೆ#ದರಿಕೆ ಪತ್ರವನ್ನು ಗಂ#ಭೀರವಾಗಿ ಪರಿಗಣಿಸಿದ ಪೊಲೀಸರು, ಸೂಕ್ಷ್ಮ ವಿಷಯವಾಗಿದ್ದರಿಂದ ಬಹಿರಂಗಪಡಿಸದೇ ತನಿಖೆ ಕೈಗೆತ್ತಿಕೊಂಡಿದ್ದರು.
ಸದ್ಯ ಬಂಧಿತ ಆರೋಪಿ ಹನುಮಂತಪ್ಪನನ್ನು ಚೆನ್ನೈ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಚೆನ್ನೈನಿಂದ ಭಟ್ಕಳಕ್ಕೆ ಕರೆತಂದು ತನಿಖೆ ನಡೆಸುಲು ಪೊಲೀಸರ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೋಸ್ಟ್ ಕಾರ್ಡ್'ನಲ್ಲಿ ತನ್ನ ಹೆಸರು ಹಾಗೂ ವಿಳಾಸವನ್ನು ಮರೆ ಮಾಚಿಕೊಂಡು, ಕಾರ್ಡ್ ನ ಮುಖಪುಟದಲ್ಲಿ ಅರ್ಧ ಚಂದ್ರಾಕೃತ ಮೇಲೆ ನಕ್ಷತ್ರ ಚಿಹ್ನೆ ಇದ್ದು, ಅದರ ಕೆಳಗೆ 786 ಹಾಗು ಉರ್ದು ಭಾಷೆಯಲ್ಲಿ ಎರಡು ಸಾಲು ಬರೆದಿತ್ತು. ಕಾರ್ಡಿನ ಕೆಳಗೆ ಭಟ್ಕಳ ಉತ್ತರಕನ್ನಡ ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿದೆ. ಕಾರ್ಡ್ ಹಿಂಬದಿ ಅಂಚೆ ಇಲಾಖೆಯ ಹಿಂದಿ ಹಾಗು ಇಂಗ್ಲಿಷ್ ಭಾಷೆಯ ರೌಂಡ್ ಸೀಲ್ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ರೀತಿಯ ಪತ್ರವು ತಮಿಳುನಾಡಿನ ಚೆನ್ನೈ ಪೊಲೀಸರಿಗೂ ರವಾನೆಯಾಗಿದ್ದು, ಶೀಘ್ರ ಕಾರ್ಯಾಚರಣೆಗಿಳಿದ ಚೆನ್ನೈ ಪೊಲೀಸರು ಚೆನ್ನೈನಲ್ಲಿದ್ದ ಅಂತರಾಜ್ಯ ಕಳ್ಳ ಹೊಸಪೇಟೆಯ ಕಮಲಾಪುರದ ಹನುಮಂತಪ್ಪ ಬಂಧಿಸಿ ತನಿಖೆ ಆರಂಭಿಸಿದ್ದರೆನ್ನಲಾಗಿದೆ.
ಹನುಮಂತಪ್ಪ ಚೆನ್ನೈನಲ್ಲಿ ಅಂಗಡಿಯೊಂದರಲ್ಲಿ ಲ್ಯಾಪ್ ಟಾಪ್ ಕದ್ದು ಮಾರಾಟ ಮಾಡಲು ಹೋಗಿದ್ದು, ಈ ವೇಳೆ ಅನುಮಾನಗೊಂಡ ಅಂಗಡಿಯಾತ ಲ್ಯಾಪ್ ಟಾಪ್ ನ ಪಾಸ್ ವರ್ಡ್ ಕೇಳಿದ್ದಾನೆ, ಆಗ ಆತ ತಡಬಡಿಸಿದ್ದಾನೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಆತನ ಬಂಧನಕ್ಕೆ ಸಹಕರಿಸಿದ್ದರು ಎಂದು ಹೇಳಲಾಗಿದೆ.