
ನಿಮ್ಮ ಅಂಗೈಗಳನ್ನು ಉಜ್ಜುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನವನ್ನೊಮ್ಮೆ ನೋಡಿ...
ನೀವು ನಿಮ್ಮ ಅಂಗೈಗಳನ್ನು ಉಜ್ಜುವ ಮೂಲಕ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಿಮ್ಮ ಅಂಗೈಗಳನ್ನು ಉಜ್ಜುವ ಮೂಲಕ, ಆಕ್ಯುಪ್ರೆಶರ್ ಬಿಂದುಗಳ ಮೇಲಿನ ಒತ್ತಡವು ಹೆಚ್ಚಾಗುತ್ತದೆ ಹಾಗು ಇದು ರಕ್ತ ಪರಿಚಲನೆಯನ್ನು ಉತ್ತೇಜಿಸುವಂತೆ ಮಾಡುತ್ತದೆ. ಜೊತೆಗೆ ಇದು ದೇಹಕ್ಕೆ ಶಾಖವನ್ನು ತರುತ್ತದೆ, ನಿಮ್ಮ ಚುರುಕುತನ ಹೆಚ್ಚಾಗುವುದು.
ಒಂದು ವೇಳೆ ಔಷಧಿ ಅಥವಾ ಚಿಕಿತ್ಸೆಯಲ್ಲಿ ವಿಳಂಬವಾದರೆ, ಈ ರೀತಿ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಬಹುದು. ಈ ರೀತಿ ಮಾಡುವುದರಿಂದ ನೀವು ಅನೇಕ ದೊಡ್ಡ ಪ್ರಯೋಜನಗಳನ್ನು ಪಡೆಯಬಹುದು.
ಅಂಗೈಗಳನ್ನು ಉಜ್ಜುವುದು ಕಣ್ಣುಗಳಿಗೆ ಪ್ರಯೋಜನಕಾರಿಗಾಗಿದೆ. ಅಂಗೈಗಳನ್ನು ಉಜ್ಜಿ ಅವುಗಳನ್ನು ಕಣ್ಣುಗಳ ಮೇಲೆ ಇರಿಸಿದ ನಂತರ ನಿಮ್ಮ ಅಂಗೈಗಳ ಉಷ್ಣತೆಯು ಕಣ್ಣುಗಳ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗು ಕಣ್ಣುಗಳ ಸುತ್ತ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ.
ಅಂಗೈಗಳನ್ನು ಉಜ್ಜುವುದರಿಂದ ರಕ್ತ ಪರಿಚಲನೆ ಉತ್ತಮವಾಗಿದೆ, ಒತ್ತಡ ಹಾಗು ಆಯಾಸವನ್ನು ನಿವಾರಿಸುತ್ತದೆ. ನಿಮ್ಮ ಅಂಗೈಗಳನ್ನು ಉಜ್ಜಿದ ನಂತರ ಅವುಗಳನ್ನು ನಿಮ್ಮ ಕಣ್ಣುಗಳ ಮೇಲೆ ಇಡುವುದರಿಂದ ಮೆದುಳಿಗೆ ಒಳ್ಳೆಯದು.
ಚಳಿಗಾಲದಲ್ಲಿ ನಿಮ್ಮ ಕೈಗಳು ಮತ್ತೆ ತಣ್ಣಗಾಗಿದ್ದರೆ, ನಿಮ್ಮ ಅಂಗೈಗಳನ್ನು ಉಜ್ಜುವುದರಿಂದ ದೇಹದಲ್ಲಿ ಶಾಖವು ಉತ್ಪತ್ತಿಯಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.