ಕಳೆದ 80 ವರ್ಷಗಳಿಂದ ಪ್ರವೇಶ ನಿರಾಕರಿಸಲ್ಪಟ್ಟಿದ್ದ ದೇವಸ್ಥಾನಕ್ಕೆ ಪ್ರವೇಶಿಸಿದ 300 ದಲಿತರು !
Monday, January 30, 2023
ತಮಿಳುನಾಡು: ಕಳೆದ 80 ವರ್ಷಗಳಿಂದ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರಾಕರಿಸಲಾಗಿದ್ದು, ಇಂದು 300 ಕ್ಕೂ ಹೆಚ್ಚು ದಲಿತರು ದೇವಾಲಯಕ್ಕೆ ಪ್ರವೇಶಿಸಿ ಪೂಜೆ ನಡೆಸಿದ್ದಾರೆ.
ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನ ಇದಾಗಿದ್ದು, ಪೋಷಕ-ಶಿಕ್ಷಕರ ಸಮಾವೇಶದ ಸಂದರ್ಭದಲ್ಲಿ ಈ ವಿಷಯ ಬಹಿರಂಗವಾಗಿದ್ದು, ಈ ಕುರಿತು ಇಲ್ಲಿನ ಪ್ರಬಲ ಸಮುದಾಯಗಳೊಂದಿಗಿನ ಸಭೆಗಳನ್ನು ನಡೆಸಲಾಯಿತು. ಈ ಗ್ರಾಮದಲ್ಲಿ 12 ಪ್ರಬಲ ಗುಂಪುಗಳ ತೀವ್ರ ವಿರೋಧದಿಂದಾಗಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಯಾವುದೇ ಅ#ಹಿತಕರ ಘಟನೆ ನಡೆಯದಂತೆ ದೇವಸ್ಥಾನದ ಸುತ್ತಮುತ್ತ ಭಾರೀ ಪೊಲೀಸ್ ನಿಯೋಜಿಸಲಾಗಿತ್ತು.
ತೆನ್ಮುಡಿಯನೂರು ಗ್ರಾಮದಲ್ಲಿ ಸುಮಾರು 500 ಪರಿಶಿಷ್ಟ ಜಾತಿ ಕುಟುಂಬಗಳು ನೆಲೆಸಿದ್ದು, ಸುಮಾರು 80 ವರ್ಷಗಳಿಂದ 200 ವರ್ಷಗಳಷ್ಟು ಹಳೆಯ ದೇವಾಲಯಕ್ಕೆ ಸಮುದಾಯಕ್ಕೆ ಪ್ರವೇಶ ನಿರಾಕರಿಸಲಾಗಿತ್ತು.