ಒಡಿಶಾ ಆರೋಗ್ಯ ಸಚಿವರನ್ನುಗುಂ#ಡಿಕ್ಕಿ ಕೊಂ#ದ ಪೊಲೀಸ್ ಅಧಿಕಾರಿ ವಜಾ: SP ರಾಹುಲ್ ಜೈನ್
ಭುವನೇಶ್ವರ(Headlines Kannada): ಒಡಿಶಾ ಆರೋಗ್ಯ ಸಚಿವ ನಬಾ ದಾಸ್ ಅವರನ್ನು ರವಿವಾರ ಗುಂ#ಡಿಕ್ಕಿ ಕೊಂ#ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಕೃಷ್ಣ ದಾಸ್ ಅವರನ್ನು ಸೋಮವಾರ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು SP ರಾಹುಲ್ ಜೈನ್ ಹೇಳಿದ್ದಾರೆ.
ಇದೇ ವೇಳೆ ಆರೋಪಿ ಗೋಪಾಲ್ ಕೃಷ್ಣ ದಾಸ್'ನನ್ನು ಪೊಲೀಸ್ ಕಸ್ಟಡಿಯಲ್ಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ಕೈಗೊಂಡಿರುವ ಪೊಲೀಸರು ಆರೋಪಿ ಬಳಿ ಇದ್ದ 9 ಎಂಎಂ ಪಿ#ಸ್ತೂಲ್ ಮತ್ತು 3 ಸುತ್ತಿನ ಜೀವಂತ ಗುಂ#ಡುಗಳು, ಅವರ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ರವಿವಾರ ಝಾರಸುಗುಡ ಜಿಲ್ಲೆಯ ಬ್ರಜರಾಜನಗರದ ಗಾಂಧಿ ಚೌನ್ ನಲ್ಲಿ ಆರೋಪಿ ಗೋಪಾಲ್ ಕೃಷ್ಣ ದಾಸ್ ಸಚಿವರ ಮೇಲೆ ಗುಂ#ಡು ಹಾರಿಸಿದ್ದರು. ಗಂ#ಭೀರವಾಗಿ ಗಾಯಗೊಂಡಿದ್ದ ಸಚಿವ ನಬಾ ದಾಸ್ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾ#ವನ್ನಪ್ಪಿದ್ದಾರೆ. ಬಂಧಿತ ಪೊಲೀಸ್ ಅಧಿಕಾರಿ ಸಚಿವರ ಮೇಲೆ ಗುಂ#ಡು ಹಾರಿಸಿದ್ದಕ್ಕೆ ಕಾರಣ ಇನ್ನೂ ಬಹಿರಂಗವಾಗಿಲ್ಲ.