'ಗೋ#ಮೂತ್ರ ಶ್ರೇಷ್ಠವಾಗಿದ್ದರೆ ಅದನ್ನು ನೀವೇ ಕು#ಡಿಯಿರಿ, ನಮ್ಮನ್ನು ಸ್ವಚ್ಛವಾಗಿರಲು ಬಿಡಿ: ವಾಟ್ಸ್​ಆ್ಯಪ್ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಆಕ್ರೋಶ'

'ಗೋ#ಮೂತ್ರ ಶ್ರೇಷ್ಠವಾಗಿದ್ದರೆ ಅದನ್ನು ನೀವೇ ಕು#ಡಿಯಿರಿ, ನಮ್ಮನ್ನು ಸ್ವಚ್ಛವಾಗಿರಲು ಬಿಡಿ: ವಾಟ್ಸ್​ಆ್ಯಪ್ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಆಕ್ರೋಶ'



ಮೈಸೂರು(Headlines Kannada): ವಾಟ್ಸ್​ಆ್ಯಪ್ ಯೂನಿವರ್ಸಿಟಿಗಳ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ದೇಶದ ನಿಜವಾದ ಇತಿಹಾಸವನ್ನು ತಿರುಚಲು ಹುನ್ನಾರ ಮಾಡಲಾಗುತ್ತಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್  ಬಿಜೆಪಿ ಹಾಗೂ ಆರ್​ಎಸ್​ಎಸ್ ವಿರುದ್ಧ ಪರೋಕ್ಷವಾಗಿ ಆಕ್ರೋಶವ್ಯಕ್ತಪಡಿಸಿದ್ದಾರೆ. 

ಜೈಭೀಮಾ ಕೋರೆಂಗಾವ್ ವಿಜಯೋತ್ಸವ ಸಮಿತಿಯಿಂದ ಮೈಸೂರಿನ  ಅಶೋಕಪುರಂ ಬಳಿ ಇರುವ ಜಯನಗರ ರೈಲ್ವೆ ಗೇಟ್ ಬಳಿಯ ಕೋರೆಂಗಾವ್ ಸ್ಥಂಭಕ್ಕೆ ಪುಷ್ಪಾರ್ಚನೆ ಮಾಡಿ ಭೀಮಾ ಕೋರೆಗಾಂವ್ 205ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಎಡಬಿಡಂಗಿಗಳಿಗೆ ಇತಿಹಾಸವಿಲ್ಲ, ಇತಿಹಾಸವೂ  ಗೊತ್ತೂ ಇಲ್ಲ, ಇದರಿಂದಲೇ ಇವರಿಗೆ ಭೂ#ತಕಾಲ, ವರ್ತಮಾನದ ಕಾಲವೂ ಅರ್ಥವಾಗುತ್ತಿಲ್ಲ. ಭವಿಷ್ಯತ್ ಕಾಲದ ಕುರಿತು ಅರಿವಿಲ್ಲ. ಅದಕ್ಕಾಗಿ ಬೇರೆ ಬೇರೆ ಮಾಧ್ಯಮಗಳ ಮೂಲಕ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ಅನುಕೂಲಕರವಾಗುವಂತೆ ಇತಿಹಾಸವನ್ನು ತಿರುಚಲು  ಹೊರಟಿದಿದ್ದಾರೆ ಎಂದು ನಟ ಪ್ರಕಾಶ್ ರಾಜ್ ಆರೋಪಿಸಿದರು.

ಇತಿಹಾಸ ತಿರುಚುವ ಇಂಥ ಸಂಘಟನೆಗಳು ದೇಶಕ್ಕೆ‌ ಅ#ಪಾಯಕಾರಿ. ದೇಶದಲ್ಲಿ ಯಾರು ಸಂಘಟನೆಯೊಂದನ್ನು ನಿಷೇಧ ಮಾಡಿದ್ದರೂ, ಅಂತಹ ಪಟೇಲರಿಗೆ 3 ಸಾವಿರ ಕೋಟಿ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ ಮಾಡಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಇವರು ಹೇಳುವ ಕಾಗಕ್ಕ ಗುಬಕ್ಕ ಕಥೆಗಳನ್ನು ಜನರು ನಂಬುವುದಿಲ್ಲ. ಇಂದು ಗೋ ಮೂತ್ರ ಕು#ಡಿದರೆ ಪವಿತ್ರವಾಗುತ್ತಾರೆ ಎಂದು ಹೇಳುವವರು ಮೊದಲು ಕು#ಡಿದು ತೋರಿಸಲಿ. ಜೈ ಭೀಮ್ ಅಸ್ಮಿತೆಯುಳ್ಳವರನ್ನು ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಪರೋಕ್ಷವಾಗಿ RSS ಮತ್ತು BJPಗೆ ತಿರುಗೇಟು ಕೊಟ್ಟರು.

ವ್ಯಾಟ್ಸ್‌ಆ್ಯಪ್ ಯೂನಿವರ್ಸಿಟಿ ಮೂಲಕ ಸುಳ್ಳು ಸುದ್ದಿಗಳನ್ನೂ, ಕಾಗಕ್ಕ ಗುಬ್ಬಕ್ಕನ ಕಥೆಯಂತಹ ಇತಿಹಾಸವನ್ನು ಸೃಷ್ಟಿಸಿ ಹರಿಬಿಡಲಾಗುತ್ತಿದೆ. ಬುಲ್‌ಬುಲ್ ಹಕ್ಕಿ ಮೇಲೆ ಸಾವರ್ಕರ್ ಪ್ರಯಾಣ, ಗೋಮೂತ್ರ ಸೇವನೆ ಆರೋಗ್ಯಕರ ಎಂಬ ಹಸಿಸುಳ್ಳು ಇದಕ್ಕೆ ಇತ್ತೀಚಿನ ನಿದರ್ಶನವಾಗಿದೆ ಎಂದ ಪ್ರಕಾಶ್ ರಾಜ್,  ಗೋಮೂತ್ರ ಶ್ರೇಷ್ಠವಾಗಿದ್ದರೆ ಅದನ್ನು ನೀವೇ ಕುಡಿಯಿರಿ. ನಮ್ಮನ್ನು ಸ್ವಚ್ಛವಾಗಿರಲು ಬಿಡಿ' ಎಂದರು.

Ads on article

Advertise in articles 1

advertising articles 2

Advertise under the article