ಉದ್ಯಮಿ ಪ್ರದೀಪ್ ಆ#ತ್ಮ#ಹ#ತ್ಯೆ ಪ್ರಕರಣ; ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ 6 ಮಂದಿ ವಿರುದ್ಧ FIR

ಉದ್ಯಮಿ ಪ್ರದೀಪ್ ಆ#ತ್ಮ#ಹ#ತ್ಯೆ ಪ್ರಕರಣ; ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ 6 ಮಂದಿ ವಿರುದ್ಧ FIRಬೆಂಗಳೂರು(Headlines Kannada): ತಲೆಗೆ ಗುಂ#ಡು ಹಾರಿಸಿಕೊಂಡು ಆ#ತ್ಮ#ಹ#ತ್ಯೆ ಮಾಡಿಕೊಂಡ ಉದ್ಯಮಿ ಪ್ರದೀಪ್ ಆ#ತ್ಮ#ಹ#ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.

ಅರವಿಂದ ಲಿಂಬಾವಳಿ ಸೇರಿದಂತೆ 6 ಜನರ ವಿರುದ್ಧ ಕೂಡ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306ರಡಿ (ಆ#ತ್ಮ#ಹ#ತ್ಯೆಗೆ ಪ್ರ#ಚೋದನೆ) FIR ದಾಖಲಾಗಿದೆ.

ಆ#ತ್ಮ#ಹ#ತ್ಯೆ ಮಾಡಿಕೊಂಡ ಉದ್ಯಮಿ ಪ್ರದೀಪ್ ಪತ್ನಿ ನೀಡಿದ ದೂರಿನನ್ವಯ ಪೊಲೀಸರು FIR​​ ದಾಖಲಿಸಿದ್ದಾರೆ. ಆ#ತ್ಮ#ಹ#ತ್ಯೆ ಮಾಡಿಕೊಳ್ಳುವ ವೇಳೆ ಡೆತ್‌ನೋಟ್‌ನಲ್ಲಿ ಅರವಿಂದ ಲಿಂಬಾವಳಿ, ಜಿ.ರಮೇಶ್‌ ರೆಡ್ಡಿ, ಕೆ.ಗೋಪಿ‌, ಜಯರಾಮ್ ರೆಡ್ಡಿ, ರಾಘವ ಭಟ್, ಸೋಮಯ್ಯ ಹೆಸರು ಉಲ್ಲೇಖವಾಗಿದ್ದು, ಎಲ್ಲರೂ ಪೊಲೀಸ್ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.

ಆ#ತ್ಮ#ಹ#ತ್ಯೆ ಮಾಡಿಕೊಂಡ ವ್ಯಕ್ತಿಯು ಮೈಸೂರು ನಿವಾಸಿಯಾಗಿದ್ದು, ಈತ ಆ#ತ್ಮ#ಹ#ತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟು ಸಾ#ವಿಗೆ ಶರಣಾಗಿದ್ದ. ಕಾರಿನಲ್ಲಿ ಗುಂ#ಡು ಹಾರಿಸಿಕೊಂಡು ಆ#ತ್ಮ#ಹ#ತ್ಯೆ ಮಾಡಿಕೊಂಡ ಈತ ಗೋಪಿ, ಸೋಮಯ್ಯ, ರಮೇಶ್ ರೆಡ್ಡಿ, ಅರವಿಂದ ಲಿಂಬಾವಳಿ, ಡಾ. ಜಯರಾಮ್ ರೆಡ್ಡಿ, ರಾಘವ ಭಟ್​ ಅವರೇ ತನ್ನ ಸಾ#ವಿಗೆ ಕಾರಣ ಎಂದು ಬರೆದಿದ್ದ ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article