ಕಾಪು: ಅಬ್ದುಲ್ ಮಜೀದ್ ನಿಧನ

ಕಾಪು: ಕಾಪು ನಿವಾಸಿ, ಉದ್ಯಮಿ ಅಬ್ದುಲ್ ಮಜೀದ್ (49) ಇಂದು ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಇವರು ಕಳೆದ ಹಲವು ವರ್ಷಗಳಿಂದ ಕಾಪುವಿನಲ್ಲಿ ಪಾದರಕ್ಷೆ ಉದ್ಯಮ ನಡೆಸುತ್ತಿದ್ದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಇವರು ಎಲ್ಲರೊಂದಿಗೆ ಸ್ನೇಹಪರವಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ