ನಿರಾಣಿ ವಿರುದ್ಧ ಹೇಳಿಕೆ ನೀಡಿರುವ ಯತ್ನಾಳ್'ಗೆ  ಮುಖ್ಯಮಂತ್ರಿ ಬೊಮ್ಮಾಯಿ ಕೊಟ್ಟ ಎಚ್ಚರಿಕೆ ಏನು?

ನಿರಾಣಿ ವಿರುದ್ಧ ಹೇಳಿಕೆ ನೀಡಿರುವ ಯತ್ನಾಳ್'ಗೆ ಮುಖ್ಯಮಂತ್ರಿ ಬೊಮ್ಮಾಯಿ ಕೊಟ್ಟ ಎಚ್ಚರಿಕೆ ಏನು?ಬೆಂಗಳೂರು(Headlineskannada): ಸಚಿವ ಮುರುಗೇಶ್ ನಿರಾಣಿ ವಿರುದ್ಧ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಮಾಡುತ್ತಿರುವ ಆರೋಪ, ಹೇಳಿಕೆಗಳಿಗೆ ಆಕ್ರೋಶ ಹೊರಹಾಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿಯಾ ಅವರು, ಎಲ್ಲರೂ ಅವರವರ ರಾಜಕೀಯ, ಸಾರ್ವಜನಿಕ ಜೀವನದಲ್ಲಿ ಜನಮನ್ನಣೆ ಪಡೆದುಕೊಂಡು ಬಂದವರೇ. ವೈಯಕ್ತಿಕ ನಿಂ#ದನೆ ಮಾಡೋದು ನಮ್ಮ ರಾಜ್ಯದ ಸಂಸ್ಕೃತಿ ಅಲ್ಲ. ಕೆಲವು ದಿನಗಳಿಂದ ಯತ್ನಾಳ್ ಅವರು ಇದನ್ನೆಲ್ಲ ಹೊರತಾಗಿ ಹೇಳಿಕೆ ನೀಡುತ್ತಿದ್ದಾರೆ. ಅವರ ಮಾತು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ನಿನ್ನೆ ನಿರಾಣಿ  ಒಬ್ಬ ಪಿಂ#ಪ್ ಅಂತ ಯತ್ನಾಳ್ ಆರೋಪಿಸಿದ್ದರು. ಯತ್ನಾಳ್ ಹೇಳಿಕೆಗೆ ಸಿಎಂ ಪ್ರತಿಕ್ರಿಯಿಸಿ, ಬೀದಿಯಲ್ಲಿ ನಿಂತು ಬಾಯಿಗೆ ಬಂದಂತೆ ಮಾತನಾಡ್ತಿರೋ ಯತ್ನಾಳ್‍ ಇನ್ನಾದರೂ ಮಾತನಾದುದನ್ನು ನಿಲ್ಲಿಸಲಿ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article