ಉಡುಪಿಯಲ್ಲಿ ಅಡಿಕೆ ಮರದಿಂದ ಬಿದ್ದು ವ್ಯಕ್ತಿಯ ಸಾ#ವು

ಉಡುಪಿಯಲ್ಲಿ ಅಡಿಕೆ ಮರದಿಂದ ಬಿದ್ದು ವ್ಯಕ್ತಿಯ ಸಾ#ವು

ಉಡುಪಿ(Headlineskannada): ಅಡಿಕೆ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃ#ತಪಟ್ಟ ಘಟನೆ ಉಡುಪಿ ನಗರದ ಮಠದಬೆಟ್ಟು ಎಂಬಲ್ಲಿ ನಡೆದಿದೆ.

ಮಠದ ಬೆಟ್ಟುವಿನ ಕಂಗಿನ ತೋಟ ಹೌಸ್ ನಿವಾಸಿ ಬೇಕರಿ ಮಾಲೀಕ 59ವರ್ಷದ ಶ್ಯಾಮ್ ಅಂಚನ್ ಮೃ#ತದುರ್ದೈವಿ. ಇವರು ಮನೆಯ ತೋಟದಲ್ಲಿ ಅಡಿಕೆ ಕೊಯ್ಯಲು ಅಡಿಕೆ ಮರ ಹತ್ತಿದ್ದರು. ಈ ವೇಳೆ ಏಕಾಏಕಿಯಾಗಿ ಅಡಿಕೆ ಮರ ತುಂಡಾದ ಪರಿಣಾಮ ಕೆಳಗೆ‌ ಬಿದ್ದ ಶ್ಯಾಮ್ ಅಂಚನ್ ಅವರು ಗಂ#ಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃ#ತಪಟ್ಟಿದ್ದಾರೆ.

ಮೃ#ತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಇವರು ಓರ್ವ ಉತ್ತಮ ಕೃಷಿಕನಾಗಿದ್ದು, ಪರ್ಕಳದ ಹೃದಯ ಭಾಗದಲ್ಲಿ ಪಾಲುದಾರಿಕೆಯಲ್ಲಿ ಬೇಕರಿ ನಡೆಸುತ್ತಿದ್ದರು.

Ads on article

Advertise in articles 1

advertising articles 2

Advertise under the article