ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆ#ದರಿಕೆ ಕರೆ; ಜೈಲಿನಲ್ಲಿದ್ದುಕೊಂಡೇ ಜೀವ ಬೆ#ದರಿಕೆ ಹಾಕಿದ ಪುತ್ತೂರಿನ ಕೈದಿ !
ಬೆಳಗಾವಿ(Headlineskannada): ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಶನಿವಾರ ಜೀವ ಬೆ#ದರಿಕೆ ಕರೆಯೊಂದು ಬಂದಿದ್ದು, ಅಪರಿಚಿತ ವ್ಯಕ್ತಿ ನಿತಿನ್ ಗಡ್ಕರಿ ಹ#ತ್ಯೆ ಮಾಡುವುದಾಗಿ ಬೆಳಗ್ಗೆ 2 ಬಾರಿ ಕರೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ತನಿಖೆ ತೀವ್ರಗೊಳಿಸಿರುವ ಪೊಲೀಸರಿಗೆ ಆರೋಪಿಯ ಪತ್ತೆ ಹಚ್ಚಿದ್ದಾರೆ.
ಸಚಿವ ನಿತಿನ್ ಗಡ್ಕರಿಗೆ ಜೀವ ಬೆ#ದರಿಕೆ ಹಾಕಿದವನನ್ನು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ದಕ್ಷಿಣಕನ್ನಡದ ಕಡಬ ತಾಲೂಕು ಶಿರಾಡಿ ಕೈದಿ ಜಯೇಶ್ ಪೂಜಾರಿ ಎಂದು ಹೇಳಲಾಗಿದೆ.
ಅಂತರ್ಜಾಲದಲ್ಲಿ ಸಚಿವರ ಮೊಬೈಲ್ ನಂಬರ್ ಪಡೆದು ನಿನ್ನೆ ಬೆಳಗ್ಗೆ 3 ಬಾರಿ ಬೆ#ದರಿಕೆ ಕರೆ ಮಾಡಿದ್ದ ಕೈದಿ ಜಯೇಶ್ ಪೂಜಾರಿ, ತಾನು ದಾವೂದ್ ಇಬ್ರಾಹಿಂ ಗ್ಯಾಂ#ಗಿನವನಾಗಿದ್ದು, 100 ಕೋಟಿ ರೂ.ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸದ್ಯ ನಾಗ್ಪುರ ಪೊಲೀಸರು ಜಯೇಶ್ ಪೂಜಾರಿಯನ್ನು ವಶಕ್ಕೆ ಪಡೆಯಲಿದ್ದಾರೆ. ಕೈದಿ ಜಯೇಶ್ ಪೂಜಾರಿ ಈ ಎಲ್ಲ ನಂಬರನ್ನು ಡೈರಿಯೊಂದರಲ್ಲಿ ಬರೆದುಕೊಂಡಿದ್ದು, ಆ ಡೈರಿ ಪತ್ತೆಯಾಗಿದೆ. ಆತ ಬಳಸಿದ ಮೊಬೈಲ್ಗಾಗಿ ಪೊಲೀಸರು ಶೋಧಕಾರ್ಯ ನಡೆಸಿದರೂ, ಮೊಬೈಲ್ ಸಿಕ್ಕಿಲ್ಲ, ಇಂದು ನಾಗ್ಪುರ ಪೊಲೀಸರು ಜಯೇಶ್ನನ್ನು ವಿಚಾರಣೆಗೆ ನಾಗ್ಪುರಗೆ ಕರೆದುಕೊಂಡು ಹೋಗಿ ತನಿಖೆ ನಡೆಸುವ ಸಾಧ್ಯತೆ ಇದೆ.
ಈ ಹಿಂದೆ ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್‌ಗೆ ಜೀವ ಬೆ#ದರಿಕೆ ಹಾಕಿದ್ದ. ಕೈದಿ ಜಯೇಶ್ ಪೂಜಾರಿ ಕೊ#ಲೆ ಸೇರಿ 3 ಪ್ರಕರಣದಲ್ಲಿ ಜೈಲು ಸೇರಿದ್ದು, ಪುತ್ತೂರಿನ ಕೊ#ಲೆಯೊಂದರ ಪ್ರಕರಣದಲ್ಲಿ ಜೀವಾವಧಿ ಶಿ#ಕ್ಷೆಯನ್ನು ಅನುಭವಿಸುತ್ತಿದ್ದಾನೆ ಎನ್ನಲಾಗಿದೆ.