ಅಂ#ತ್ಯಸಂಸ್ಕಾರಕ್ಕೆಂದು ಕೊಂಡೊಯ್ಯುವಾಗ ಏಕಾಏಕಿ ಕಣ್ಣುಬಿಟ್ಟ ಸ#ತ್ತ ಮಹಿಳೆ! ಮುಂದೆ ಏನಾಯಿತು..?

ಅಂ#ತ್ಯಸಂಸ್ಕಾರಕ್ಕೆಂದು ಕೊಂಡೊಯ್ಯುವಾಗ ಏಕಾಏಕಿ ಕಣ್ಣುಬಿಟ್ಟ ಸ#ತ್ತ ಮಹಿಳೆ! ಮುಂದೆ ಏನಾಯಿತು..?ಫಿರೋಜಾಬಾದ್(Headlines Kannada): ವೈದ್ಯರು ಸ#ತ್ತಿದ್ದಾಳೆಂದು ಘೋಷಿಸಿದ ಬಳಿಕ ಅಂ#ತ್ಯಸಂಸ್ಕಾರಕ್ಕೆಂದು ಕೊಂಡೊಯ್ಯುವಾಗ ಏಕಾಏಕಿ ವೃದ್ಧೆಯೊಬ್ಬಳು ಕಣ್ಣುಬಿಟ್ಟ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಇತ್ತೀಚೆಗೆ ನಡೆದಿದೆ.

ಬಿಲಾಸ್ಪುರ ನಿವಾಸಿ 81 ವರ್ಷದ ವೃದ್ಧೆ ಹರಿಭೇಜಿ ಎಂಬಾಕೆ ಮೃ#ತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಕಣ್ಣೀರು ಸುರಿಸಿದ ಕುಟುಂಬದ ಸದಸ್ಯರು, ಆಕೆಯ ಅಂ#ತ್ಯಸಂಸ್ಕಾರಕ್ಕಾಗಿ ಕರೆದೊಯ್ಯುವಾಗ ಒಮ್ಮೆಲೇ ಆಕೆ ಕಣ್ತೆರೆದಿದ್ದಾಳೆ. ಇದನ್ನು ಕಂಡ ಜನ ದಂಗಾಗಿದ್ದಾರೆ.

ಡಿ. 23ರಂದು ಫಿರೋಜಾಬಾದ್‌ನಲ್ಲಿನ ಟ್ರಾಮಾ ಕೇಂದ್ರಕ್ಕೆ ವೃದ್ಧೆ ಹರಿಭೇಜಿಯನ್ನು ಸೇರಿಸಲಾಗಿತ್ತು. ಈ ವೇಳೆ ಬ್ರೈನ್ ಹ್ಯಾಮರೇಜ್‌ಗೆ ಒಳಗಾಗಿದ್ದು, ಆಕೆಯ ಮೆದುಳು ನಿಷ್ಕ್ರಿಯವಾಗಿ ಸಾ#ವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಅನಂತರ ಕುಟುಂಬಸ್ಥರೆಲ್ಲ ಸೇರಿ ಆಕೆಯ ಅಂ#ತ್ಯಸಂಸ್ಕಾರಕ್ಕೆಂದು ಸಾಗಿಸುತ್ತಿದ್ದ ವೇಳೆ ಆಕೆ ಇದ್ದಕ್ಕಿದ್ದಂತೆ ಕಣ್ಣು ಬಿಟ್ಟಿದ್ದಾಳೆ. ಹರಿಭೇಜಿ ಜೀವಂತ ಇರುವುದನ್ನು ಕಂಡು ಕುಟುಂಬದವರು ಅಚ್ಚರಿಗೊಂಡದ್ದಲ್ಲದೆ ಸಂತೋಷಕ್ಕೊಳಗಾಗಿದ್ದಾರೆ. 

ಬಳಿಕ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಕುಟುಂಬಸ್ಥರು ಈ ಸಂದರ್ಭದಲ್ಲಿ ಸಂತಸದಲ್ಲಿದ್ದರು. ಆದರೆ ಮರುದಿನ ಬೆಳಿಗ್ಗೆ ಎದ್ದು ಮನೆಯವರು ನೋಡುವಾಗ ಆಕೆಯ ಉಸಿರು ಶಾಶ್ವತವಾಗಿ ನಿಂತಿತ್ತು.

Ads on article

Advertise in articles 1

advertising articles 2

Advertise under the article