ಬಿಜೆಪಿಗೆ ಗುಡ್ ಬೈ ಹೇಳಲು ಮುಂದಾಗಿರುವ ವರುಣ್ ಗಾಂಧಿ; ಯಾವ ಪಕ್ಷ ಸೇರಲಿದ್ದಾರೆ..?
ಲಕ್ನೋ: ಮೋದಿ ಸರಕಾರದ ಆಡಳಿತದ ವಿರುದ್ಧವೇ ಹೇಳಿಕೆ ನೀಡಿ ಬಿಜೆಪಿಗೆ ಇರಿಸುಮುರಿಸು ತರುತ್ತಿದ್ದ ಸಂಸದ ವರುಣ್ ಗಾಂಧಿ ಬಿಜೆಪಿಗೆ ಗುಡ್ ಬೈ ಹೇಳಿಯೇ ಬೇರೆ ಪಕ್ಷ ಸೇರಲು ಮುಂದಾಗಿದ್ದಾರೆನ್ನಲಾಗಿದೆ.
ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಅಥವಾ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಸೇರುವ ಆಲೋಚನೆಯಲ್ಲಿ ವರುಣ್ ಗಾಂಧಿ ಇದ್ದಾರೆ ಎಂದು ಹೇಳಲಾಗುತ್ತಿದೆ.
BJP ಸಂಸದ ವರುಣ್ ಗಾಂಧಿ ಅವರ ಇತ್ತೀಚಿನ ಹೇಳಿಕೆಗಳು ಮತ್ತು ಅವರ ಸ್ವಂತ ಪಕ್ಷದ ನೀತಿಗಳು ಹಾಗೂ ಆಚರಣೆಗಳ ಬಗ್ಗೆ ಬಹಿರಂಗ ಟೀಕೆಗಳು ಅವರು ಅಂತಿಮವಾಗಿ ಬಿಜೆಪಿಯಿಂದ ನಿರ್ಗಮಿಸಿ ಕಾಂಗ್ರೆಸ್ ಪ್ರವೇಶಕ್ಕೆ ದಾರಿ ಮಾಡಿಕೊಡುತ್ತಿದ್ದಾರೆಯೇ ಎಂದು ಹಲವರು ಆಶ್ಚರ್ಯ ಪಡುವಂತೆ ಮಾಡಿದೆ. ಕಳೆದ ಎರಡು ವರ್ಷಗಳಿಂದ ಪ್ರಮುಖ ನಿಯತಕಾಲಿಕಗಳಲ್ಲಿ ಪ್ರಕಟವಾದ ಅವರ ಲೇಖನಗಳಲ್ಲಿ ಬಿಜೆಪಿಯೊಂದಿಗಿನ ಅವರ ಭ್ರಮನಿರಸನವು ಗೋಚರಿಸುತ್ತಿದೆ.
ಮುಂದಿನ 2024ರ ಲೋಕಸಭೆ ಚುನಾವಣೆಗೂ ಮುನ್ನ ವರುಣ್ ಗಾಂಧಿ ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬೇರೆ ಪಕ್ಷದತ್ತ ಒಲವು ತೋರಿದ್ದಾರೆ ಎಂದು ಹೇಳಲಾಗುತ್ತಿದೆ.
ಸೋದರಿ ಪ್ರಿಯಾಂಕಾ ಗಾಂಧಿ ಜತೆ ವರುಣ್ ಗಾಂಧಿಗೆ ಉತ್ತಮ ಸಂಬಂಧವಿಟ್ಟುಕೊಂಡಿದ್ದು, ಈ ಹಿನ್ನೇಲೆಯಲ್ಲಿ ಅವರು ಕೈ ಹಿಡಿಯುವ ಸಾಧ್ಯತೆ ಇದೆ. ಆದರೆ ರಾಹುಲ್-ಸೋನಿಯಾ ಗಾಂಧಿ ಜತೆ ವರುಣ್ ಸಂಬಂಧ ಹೇಳುವಷ್ಟು ಚೆನ್ನಾಗಿಲ್ಲ. ಆದರೂ ವರುಣ್ ಬಂದರೆ ಬೇಡ ಎಂದು ಹೇಳುವಷ್ಟು ಮನಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರಿಲ್ಲ.
ಇದರ ಮಧ್ಯೆ ತೃಣಮೂಲ ಕಾಂಗ್ರೆಸ್ ಹಾಗೂ ಅರವಿಂದ ಕೇಜ್ರಿವಾಲ್‌ರ ಆಪ್ ಸೇರುವ ಬಗ್ಗೆಯೂ ಉತ್ಸುಕರಾಗಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.