ಮುಂಬೈ ವಿಮಾನ ನಿಲ್ದಾಣದಲ್ಲಿ ಡ್ರ#ಗ್ಸ್ ಸಾಗಿಸುತ್ತಿದ್ದ ವ್ಯಕ್ತಿ ಬಂಧನ; ಬರೋಬ್ಬರಿ 28.1 ಕೋಟಿ ರೂಪಾಯಿ ಮೌಲ್ಯದ ಕೊ#ಕೇನ್ ವಶ
ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಕೊ#ಕೆನ್ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಿರುವ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು, ಆತನಿಂದ ಬರೋಬ್ಬರಿ 28.1 ಕೋಟಿ ರೂಪಾಯಿ ಮೌಲ್ಯದ ಕೊ#ಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಡಫಲ್ ಬ್ಯಾಗ್‌ನಲ್ಲಿ ಗು#ಪ್ತವಾಗಿ ಸಾಗಿಸುತ್ತಿದ್ದ 2.81 ಕೆಜಿ ಕೊ#ಕೆನ್ ಮಾರುಕಟ್ಟೆ ಮೌಲ್ಯ 28.1 ಕೋಟಿ ರೂಪಾಯಿ ಎಂದು ಕಸ್ಟಮ್ಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿ ನೈನಿತಾಲ್ ಮೂಲದವನಾಗಿದ್ದು, ಕೊ#ಕೇನ್ ಅನ್ನು "ಡಫಲ್ ಬ್ಯಾಗ್‌ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹ್ಯಾಂಡ್ ಬ್ಯಾಗ್ ನಲ್ಲಿ ಸಾಗಿಸುತ್ತಿದ್ದಾಗ ಅನುಮಾನಗೊಂಡ ಪೊಲೀಸರು, ಆತನನ್ನು ತಪಾಸಣೆಗೆ ಒಳಪಡಿಸಿದ್ದಾರೆ. ತಪಾಸಣೆ ವೇಳೆ ಕೊ#ಕೇನ್ ಪತ್ತೆಯಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆ ವೇಳೆ ಬಂಧಿತ ಆರೋಪಿ ತಾನು ಹ#ನಿಟ್ರ್ಯಾಪ್ ಗೆ ಒಳಗಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರು ತನ್ನನ್ನು ಬೆದರಿಸಿ ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.