
ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್ ಕು#ಸಿತ ಪ್ರಕರಣ; ಮೃ#ತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ: ಬೊಮ್ಮಾಯಿ ಘೋಷಣೆ
Tuesday, January 10, 2023
ಧಾರವಾಡ(Headlineskannada): ಬೆಂಗಳೂರಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ವೇಳೆ ಕಬ್ಬಿಣದ ಪಿಲ್ಲರ್ ಬಿದ್ದು ತಾಯಿ, ಮಗು ಸಾ#ವನ್ನಪ್ಪಿದ ಪ್ರಕರಣಕ್ಕೆ ಸಂಭಂದಿಸಿದಂತೆ ಮೃ#ತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 10 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಈಗಾಗಲೇ BMRCL ಕೂಡ ತಲಾ 10 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಎಲ್ಲ ಮಾಹಿತಿ ಪಡೆಯುತ್ತಿದ್ದೇನೆ. ನಾಗವಾರ್‌ನಲ್ಲಿ ಸ್ಟೀಲ್ ಪಿಲ್ಲರ್ ಕುಸಿದಿದ್ದು, ಹೆಣ್ಣು ಮಗಳು ಹಾದು ಹೋಗುವಾಗ ಕಬ್ಬಿಣದ ಪಿಲ್ಲರ್ ತಲೆ ಮೇಲೆ ಬಿದ್ದು ಮೃ#ತಪಟ್ಟಿದ್ದಾರೆ. ಅದು ಅತ್ಯಂತ ದುರದೃಷ್ಟಕರ ವಿಷಯ. ಈ ಬಗ್ಗೆ ತನಿಖೆ ಮಾಡಿ, ಏನು ಕಾರಣ? ಯಾರು ಗುತ್ತಿಗೆದಾರ? ಎಲ್ಲವನ್ನೂ ಕೂಲಂಕಷವಾಗಿ ತನಿಖೆ ಮಾಡಲಾಗುವುದು. ಸಂಬಂಧಿಸಿವರ ಮೇಲೆ ಪ್ರಕರಣ ದಾಖಲಿಸಲು ಹೇಳಿದ್ದೇನೆ ಎಂದರು.
ಈ ಅವಘಡಕ್ಕೆ 40 ಪರ್ಸೆಂಟ್ ಕಮೀಷನ್ ಕಾರಣ ಎಂದು ಡಿಕೆಶಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಕಾಮಾಲೆ ಕಣ್ಣಿಯಿಂದ ಎಲ್ಲವನ್ನು ನೋಡಿದರೇ ಹೀಗೆ. ಅವರ ಆಡಳಿತ ಕಾಲದಲ್ಲಿ ಏನೆಲ್ಲ ಆಗಿದೆ ಎಂಬುದನ್ನು ನೋಡಿಕೊಳ್ಳಲಿ ಎಂದರು.