
ಬೆಳಗಾವಿ ಸಾರಥಿ ನಗರದ ಫಾತೀಮಾ ಮಸೀದಿ ವಿ#ವಾದ; ಇದೊಂದು ಸಂಘಪರಿವಾರದ ಕುತಂತ್ರ: ಎಲ್ಲಾ ರೀತಿಯ ದಾಖಲೆ ನೀಡಲು ಸಿದ್ಧ: ಫಜಲ್ ಪಠಾಣ್
ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಮುಖಂಡ ಫಜಲ್ ಪಠಾಣ್ ಮಾತನಾಡಿ, ಮಸೀದಿ ಕಾನೂನು ಪ್ರಕಾರ ಇದೆಯೋ ಅಥವಾ ಕಾನೂನು ಬಾಹಿರ ಇದೆಯೋ ಅದನ್ನ ನಿರ್ಧರಿಸಲು ಇವರು ಯಾರು ? ಮಸೀದಿ ನಿರ್ಮಾಣದ ಮೇಲೆ ಅನುಮಾನ ಇದ್ದರೆ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು ಅಥವಾ ನಗರ ಪೊಲೀಸ್ ಆಯುಕ್ತರ ಬಳಿ ಹೋಗಲಿ ಎಂದು ಹೇಳಿದರು.
ಸಾರಥಿ ನಗರದಲ್ಲಿಕಳೆದ 7 ವರ್ಷಗಳಿಂದ ಈ ಮಸೀದಿ ಇದ್ದು, ಈಗ ವಿ#ವಾದ ಸೃಷ್ಟಿಸುತ್ತಿದ್ದಾರೆ. ನಮಗೆ ಈ ರೀತಿಯಾಗಿ ಕಿ#ರುಕುಳ ನೀಡುವ ಹಕ್ಕು ಯಾರಿಗೂ ಇಲ್ಲ. ಗುಂಪು ಕಟ್ಟಿ ಬಂದು ಹೆದರಿಸಿದರೇ ನಾವು ಅದಕ್ಕೆ ಜಗ್ಗಲ್ಲ, ಮಸೀದಿ ಬಗ್ಗೆ ಸಂಶಯ ಇದ್ದರೆ ಪೊಲೀಸರಿಗೆ ಹೋಗಿ ದೂರು ನೀಡಲಿ. ಇತ್ತೀಚಿಗೆ ಹಿಂದೂ ಸಮಾವೇಶದಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ ಬಳಿಕ ಈ ಗದ್ದಲ ಹೆಚ್ಚಾಗಿದೆ. ವಕ್ಫ್ ಬೋರ್ಡ್‌ನವರು ಅದಕ್ಕೆ ಸಮರ್ಪಕ ದಾಖಲೆ ಕೊಡುತ್ತಾರೆ. ಜಿಲ್ಲಾಧಿಕಾರಿ ಅವರು ಕರೆಯಲಿ ನಾವು ದಾಖಲೆ ಕೊಡುತ್ತೇವೆ. ಅನಂತರ ಅದು ಮನೆಗೆ ಅನುಮತಿ ಇತ್ತೋ ಅಥವಾ ಮಸೀದಿಗೆ ಅನುಮತಿ ಇತ್ತೋ ಎಂಬುದನ್ನ ಇಲಾಖೆಯವರು ನಿರ್ಧರಿಸಲಿ ಎಂದವರು ಹೇಳಿದರು.
ಸುದ್ದಿಗೊಷ್ಠಿಯಲ್ಲಿ ಧರ್ಮಗುರುಗಳು, ಮುಸ್ಲಿಂ ಸಮುದಾಯದ ಮುಖಂಡರಾದ ಖಾಜಿ ಮುಫ್ತಿ ಮಂಜೂರ್ ಆಲಂ ಮಿಸ್ಬಾಯಿ, ಮಹಾನಗರ ಪಾಲಿಕೆ ಸದಸ್ಯ ಅಜಿಂ ಪಟವೇಗಾರ್ ಸೇರಿ ಹಲವರು ಇದ್ದರು.