ಕಿನ್ನಿಮೂಲ್ಕಿಯಲ್ಲಿ ಅಪಘಾತದಲ್ಲಿ ಗಾಯಗೊಂಡ ಮಂಗನ ರಕ್ಷಣೆ
Friday, January 27, 2023
ಉಡುಪಿ(Headlines Kannada): ವಾಹನ ಅಪಘಾತದಿಂದ ಗಾಯಗೊಂಡ ಮಂಗನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಣೆ ಮಾಡಿ ಮಾನವೀಯತೆ ತೋರಿದ್ದಾರೆ.
ಕಿನ್ನಿಮೂಲ್ಕಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ಮಂಗವೊಂದಕ್ಕೆ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಮಂಗನನ್ನು ನಿತ್ಯಾನಂದ ಒಳಕಾಡು ಅವರು ಚಿಕಿತ್ಸೆಗೆ ಒಳಪಡಿಸಿ ಅರಣ್ಯ ಇಲಾಖೆಯ ಕೇಶವ ಪೂಜಾರಿಯವರಿಗೆ ಹಸ್ತಾಂತರಿಸಿದರು. ಮಂಗ ಸಂಪೂರ್ಣ ಗುಣಮುಖವಾದ ಬಳಿಕ ಮರಳಿ ಅರಣ್ಯಕ್ಕೆ ಬಿಡಲಾಗುತ್ತದೆ ಎಂದು ಕೇಶವ ಪೂಜಾರಿಯವರು ತಿಳಿಸಿದ್ದಾರೆ.