ದುಬೈನಿಂದ ಬರುತ್ತಿದ್ದ ವಿಮಾನ ಅ#ಪಹರಣ!  ಸುಳ್ಳು ಟ್ವೀಟ್ ಮಾಡಿದ ಪ್ರಯಾಣಿಕ ರಾಥೋಡ್ ಬಂಧನ

ದುಬೈನಿಂದ ಬರುತ್ತಿದ್ದ ವಿಮಾನ ಅ#ಪಹರಣ! ಸುಳ್ಳು ಟ್ವೀಟ್ ಮಾಡಿದ ಪ್ರಯಾಣಿಕ ರಾಥೋಡ್ ಬಂಧನ

ಮುಂಬೈ(Headlines Kannada): ದುಬೈನಿಂದ ಜೈಪುರಕ್ಕೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ವಿಮಾನವನ್ನು ಅಪ#ಹರಿಸಲಾಗಿದೆ ಎಂದು ಸುಳ್ಳು ಟ್ವೀಟ್ ಮಾಡಿ ಈಗ ಪೋಲೀಸರ ಅತಿಥಿಯಾಗಿದ್ದಾನೆ.

ದುಬೈನಿಂದ ಜೈಪುರಕ್ಕೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ರಾಜಸ್ಥಾನದ ನಾಗೌರ್ ನಿವಾಸಿ ಮೋತಿ ಸಿಂಗ್ ರಾಥೋಡ್, ತಾನು ಪಯಣಿಸುತ್ತಿರುವ ವಿಮಾನವನ್ನು ಅಪ#ಹರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದ. ಈ ಸುದ್ದಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಮತ್ತು ಪೊಲೀಸರು ಕಾರ್ಯಾಚರಣೆಗೆ ಇಳಿಡಿದ್ದು, ಈ ವೇಳೆ ಈ ಸುದ್ದಿ ಸುಳ್ಳು ಎಂಬುದು ಕಾತರಿಯಾಗಿದೆ. 

ತನಿಖೆ ನಡೆಸಿದ ಪೊಲೀಸರು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನನ್ನು ಬಂಧಿಸಿದ್ದಾರೆ. ಮೋತಿ ಸಿಂಗ್ ರಾಥೋಡ್  ದುಬೈ-ಜೈಪುರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ, ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಜೈಪುರಕ್ಕೆ ಹೋಗದೆ ವಿಮಾನವು ಇಂದಿರಾಗಾಂಧಿ ಏರ್​ಪೋರ್ಟ್​ಗೆ ತಲುಪಿತ್ತು.

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಬೆಳಗ್ಗೆ 9:45 ಕ್ಕೆ ಇಳಿದಿದ್ದು, ಮಧ್ಯಾಹ್ನ 1:40 ಕ್ಕೆ ಟೇಕ್ ಆಫ್ ಮಾಡಲು ಅನುಮತಿ ನೀಡಲಾಯಿತು. ಈ ವೇಳೆ ರಾಥೋಡ್ ವಿಮಾನ ಅಪ#ಹರಣವಾಗಿದೆ ಎಂದು ಟ್ವೀಟ್ ಮಾಡಿದ್ದಾನೆ. ಈ ವೇಳೆ ತಪಾಸಣೆ ಮಾಡಿದಾಗ ಇದೊಂದು ಸುಳ್ಳು ಟ್ವೀಟ್ ಎಂದು ಅರಿತ ಪೊಲೀಸರು, ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Ads on article

Advertise in articles 1

advertising articles 2

Advertise under the article