ಮಂಡ್ಯದಲ್ಲಿ ಬಿಜೆಪಿಯೊಳಗೆ ಭುಗಿಲೆದ್ದ ಭಿನ್ನಮತ; ಸಚಿವ ಆರ್.ಅಶೋಕ್'ರ ವಿರುದ್ಧ ಆಕ್ರೋಶ: ಗೋ ಬ್ಯಾಕ್ ಅಭಿಯಾನ
ಮಂಡ್ಯ(Headlines Kannada): ರಾಜ್ಯ ವಿಧಾನಸಭೆಗೆ ಚುನಾವಣೆಗೆ ಹತ್ತಿರುವಾಗುತ್ತಿದ್ದಂತೆಯೇ ಬಿಜೆಪಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಂಡ್ಯ ಬಿಜೆಪಿಯೊಳಗೆ ಭಿನ್ನಮತ ಸ್ಫೋ#ಟಗೊಂಡಿದ್ದು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿರುವ ಆರ್.ಅಶೋಕ್ ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಬಿಜೆಪಿಗೆ ಇದು ಮುಳುವಾಗುವ ಸಂಭವವಿದೆ.
ಬಿಜೆಪಿಗರಿಂದಲೇ ಆರ್.ಅಶೋಕ್ ಅವರಿಗೆ ವಿರೋಧ ವ್ಯಕ್ತವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಗೋ ಬ್ಯಾಕ್ ಅಭಿಯಾನ (Go Back Campaign) ಶುರುಮಾಡಿದ್ದಾರೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್.ಅಶೋಕ್ ನೇಮಕವಾದ ಹಿನ್ನೆಲೆಯಲ್ಲಿ ಬಿಜೆಪಿಗರಿಂದಲೇ ಭಾರೀ ವಿರೋಧ ವ್ಯಕ್ತವಾಗಿದ್ದು, ಅವರು ಬಿಜೆಪಿ ಬೆಳೆಯಲು ಬಿಡೂದಿಲ್ಲ ಎಂದು ಕಿಡಿಕಾರಿದ್ದಾರೆ.
ಅಶೋಕ್ ಮಂಡ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ರಾಜಕೀಯ ಮಾಡುತ್ತಾರೆ. ಅಶೋಕ್‍ರಿಂದ ಮಂಡ್ಯದಲ್ಲಿ ಬಿಜೆಪಿ ಬೆಳೆಯಲ್ಲ, ಈ ಕಾರಣಕ್ಕಾಗಿ ಅಶೋಕ್ ಗೋಬ್ಯಾಕ್ ಎಂಬ ಕೂಗು ಕೇಳಿಬಂದಿದೆ. ಬಾಯ್ಕಟ್, ಗೋ ಬ್ಯಾಕ್ ಅಶೋಕ್ ಎಂಬ ಸಾಲುಗಳನ್ನು ಬರೆದು ಮಂಡ್ಯ ಆರ್ ಪಿ ರಸ್ತೆಯ ಗೋಡೆಗಳ ಮೇಲೂ ಪೋಸ್ಟರ್'ಗಳನ್ನು ಅಂಟಿಸಿ ಆಕ್ರೋಶ ಹೊರಹಾಕಿದ್ದಾರೆ.