ಕೆಜಿಎಫ್ ದಾಖಲೆ ಮುರಿದ ಶಾರುಖ್ ಖಾನ್ ಅಭಿನಯದ 'ಪಠಾಣ್'; ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತೇ...?
ಮುಂಬೈ(Headlines Kannada): ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ಪಠಾಣ್' ಸಿನೆಮಾ ಜನವರಿ 25ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಂಡಿದ್ದು, ಮೊದಲ ದಿನವೇ ಕೆಜಿಎಫ್ ಹಿಂದಿಯಲ್ಲಿ ಮಾಡಿದ್ದ ಮೊದಲ ದಿನದ ಕಲೆಕ್ಷನ್ ಅನ್ನು ಹಿಂದಿಕ್ಕಿ ದಾಖಲೆ ಬರೆದಿದೆ.
ವಾಸ್ತವವಾಗಿ ಪಠಾಣ್ ಚಿತ್ರ ಗಳಿಕೆಯ ವಿಷಯದಲ್ಲಿಯೂ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದಿದೆ. ಪಠಾಣ್ ಚಿತ್ರದ ಭಾರತದಲ್ಲಿ ಮೊದಲ ದಿನವೇ 54 ಕೋಟಿ ಗಳಿಸಿದೆ.
ಮೊದಲ ದಿನವೇ ಆಸ್ಟ್ರೇಲಿಯಾದಲ್ಲಿ ರೂ 600k ( 4,89,18,300.00 ರೂ.) ಮತ್ತು USA ನಲ್ಲಿ ರೂ 1 ಮಿಲಿಯನ್ ( ಬುಧವಾರ ಮಧ್ಯಾಹ್ನದವರೆಗೆ) ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ವರ್ಲ್ಡ್ ಬಾಕ್ಸ್ ಆಫೀಸ್ ಪ್ರಕಾರ 2ನೇ ದಿನ ಪಠಾಣ್ ಸಿನಿಮಾ ಅಂದಾಜು 175 ಕೋಟಿ ರೂ. ಗಳಿಸಬಹುದು ಎಂದು ಊಹಿಸಿದೆ. ಪಿವಿಆರ್ ನಲ್ಲಿ ಮೊದಲ ದಿನ 11:40 ಕೋಟಿ, ಐನಾಕ್ಸ್ ನಲ್ಲಿ 8.75 ಕೋಟಿ, ಸಿನಿಪೋಲಿಸ್ 4.90 ಕೋಟಿ ರೂ.ಗಳಿಸಿದೆ ಎಂದು ಮತ್ತೊಬ್ಬ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಸಿದ್ದಾಥ್ ಆನಂದ್ ನಿರ್ದೇಶನದ ಸಿನಿಮಾದಲ್ಲಿ, ಶಾರುಖ್ ಖಾನ್, ದೀಪಿಕಾ ಪಡುಕೋಣೆ ಜೊತೆಗೆ ಜಾನ್ ಅಬ್ರಹಾಂ ನಟಿಸಿದ್ದಾರೆ.
ಶಾರುಖ್ ಖಾನ್ ಅಭಿನಯದ 'ಪಠಾಣ್' ಈ ಬಾರಿ ಕೆಜಿಎಫ್-2 ಅನ್ನು ಹಿಂದಿಕ್ಕಿದೆ. ಈ ಹಿಂದೆ ಕೆಜಿಎಫ್-2 ಭಾರತದಲ್ಲಿ 53.95 ಕೋಟಿ ಗಳಿಸಿತ್ತು. ಆದರೆ ಪಠಾಣ್ 54 ಕೋಟಿ ಗಳಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದಲ್ಲದೇ ನಟ ಶಾರುಖ್ ತಮ್ಮದೇ ಆದ "ಹ್ಯಾಪಿ ನ್ಯೂ ಇಯರ್" ಚಿತ್ರವನ್ನೂ ಹಿಂದಿಕ್ಕಿದ್ದಾರೆ. 2014ರಲ್ಲಿ ಬಿಡುಗಡೆಯಾದ 'ಹ್ಯಾಪಿ ನ್ಯೂ ಇಯರ್' ಮೊದಲ ದಿನವೇ 44.97 ಕೋಟಿ ಗಳಿಸಿವ ಮೂಲಕ ದಾಖಲೆ ನಿರ್ಮಿಸಿತ್ತು.