ಪರಿಶಿಷ್ಟ ಜಾತಿ/ಪಂಗಡದ ಮೀಸಲು ಹಣ ದು#ರ್ಬಳಕೆ: ಸಚಿವರ ಚಮಚಾಗಿರಿ ಮಾಡುವ ಚೇ#ಳಾಗಳಿಂದ ಸ್ಪಷ್ಟೀಕರಣಕ್ಕೆ ಸುಂದರ್ ಮಾಸ್ತರ್ ಟೀಕೆ

ಪರಿಶಿಷ್ಟ ಜಾತಿ/ಪಂಗಡದ ಮೀಸಲು ಹಣ ದು#ರ್ಬಳಕೆ: ಸಚಿವರ ಚಮಚಾಗಿರಿ ಮಾಡುವ ಚೇ#ಳಾಗಳಿಂದ ಸ್ಪಷ್ಟೀಕರಣಕ್ಕೆ ಸುಂದರ್ ಮಾಸ್ತರ್ ಟೀಕೆ

ಉಡುಪಿ(Headlines Kannada): ರಾಜ್ಯ ಸರಕಾರ ದಲಿತರ ಸಬಲೀಕರಣಕ್ಕಾಗಿ ಮೀಸಲಿರಿಸಿದ್ದ ಎಸ್.ಸಿ.ಪಿ./ಟಿ.ಎಸ್.ಪಿ. ಅನುದಾನಗಳನ್ನು ದುರ್ಬಳಕೆ ಮಾಡುತ್ತಿರುವ ಬಗ್ಗೆ ಉತ್ತರಿಸುವಂತೆ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಆಗ್ರಹಿಸಿದ್ದು, ಆದರೆ ಅವರು ತಮ್ಮ ಪರ ಚಮಚಾಗಿರಿ ಮಾಡುತ್ತಿರುವ ಚೇ#ಳಾಗಳಿಂದ ಉತ್ತರಿಸುವಂತೆ ಮಾಡಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಟೀಕಿಸಿದ್ದಾರೆ.

ಸುಂದರ್ ಮಾಸ್ತರ್ ಹೇಳಿಕೆಯಲ್ಲಿ ಹೇಳಿದ್ದೇನು..?

ತಾನು ಕೇಳಿರುವ ಪ್ರಶ್ನೆಗಳಾದ ದಲಿತರ ಮನೆಗಳೇ ಇಲ್ಲದ ಪ್ರದೇಶಗಳಿಗೆ ಕೋಟ್ಯಾಂತರ ಮೀಸಲು ಹಣ ಬಳಸುವುದು ಸರಿಯೇ? ದಲಿತರ ಕಾಲೋನಿಗಳಿಗೆ ಸಚಿವರು ಭೇಟಿ ಮಾಡಿ ಅವರ ಮನೆಗಳ ದುಸ್ಥಿತಿ ಪ.ಜಾತಿ/ಪಂಗಡಗಳ ವಿದ್ಯಾವಂತ ನಿರುದ್ಯೋಗಿಗಳ ಪರಿಸ್ಥಿತಿ, ಕುಡಿಯುವ ನೀರು, ಸ್ವ-ಉದ್ಯೋಗ, ಶಿಕ್ಷಣಕ್ಕೆ ಆದ್ಯತೆ ನೀಡದೆ ಖಾಸಗಿ ದೈವದ ಗುಡಿಗಳಿಗೆ ಅನುದಾನ ಬಳಸುವುದು ಅನಿವಾರ್ಯವೇ ಈ ಬಗ್ಗೆ ಉತ್ತರಿಸಲು ಅಸಮರ್ಥರಾಗಿರುವ ಸಚಿವರು, ತಮ್ಮ ಪರ ಚಮಚಾಗಿರಿ ಮಾಡುವ ಚೇಳಾಗಳು ಮೀಸಲು ಹುದ್ದೆ ನೇಮಕಾತಿಯಾಗಿದೆ, ಅಂಬೇಡ್ಕರ್ ಭವನ ನಿರ್ಮಾಣವಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಸರ್ಕಾರಿ ಸಂಸ್ಥೆಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಿ ದಲಿತರ ಮೀಸಲಾತಿ ಹುದ್ದೆಗಳಿಗೆ ಕೊಳ್ಳಿ ಇಟ್ಟಿರುವ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿ ಪ್ರಯೋಜನವೇನು? ಅದೇನಿದ್ದರೂ ಶೇಕಡಾ ೧೦ ಮೀಸಲಾತಿ ಪಡೆಯುವ ಮೇಲ್ವರ್ಗದವರಿಗೆ ಸಿಗಬಹುದು, ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದರಿಂದಲೇ ದಲಿತರ ಅಭಿವೃದ್ದಿಯಾಗುವುದಿಲ್ಲ, ಸಮುದಾಯ ಭವನ ಎಲ್ಲಾ ಜಾತಿ ಸಮುದಾಯದವರು ನಿರ್ಮಾಣ ಮಾಡುತ್ತಿದ್ದಾರೆ.

ಸುಂದರ್ ಮಾಸ್ತರ್ ರವರು ದಲಿತರ ಮೂಲಭೂತ ಸಮಸ್ಯೆಗಳ ಬಗ್ಗೆ, ದೌರ್ಜನ್ಯ, ಅಸಮಾನತೆಗಳ ವಿರುದ್ಧ ಧ್ವನಿ ಎತ್ತಿರುವರೇ ಹೊರತು ತನ್ನ ಗೌರವ ಹೆಚ್ಚಿಸಲು ಹೇಳಿಕೆ ನೀಡಿಲ್ಲ. ಸುಳ್ಳನ್ನೆ ಪ್ರತಿಪಾದಿಸುವವರಿಂದ ನಾವೇನು ನಿರೀಕ್ಷಿಸಲು ಸಾಧ್ಯ, ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡಿ ದಲಿತರ ಬದುಕನ್ನೆ ಕಸಿಯುತ್ತಿರುವ ಈ ಕಾಲಗಟ್ಟದಲ್ಲಿ ಈವರೆಗೂ ತುಟಿ ಬಿಚ್ಚದೆ ತಾವು ಎಸ್.ಸಿ. ಮೊರ್ಚಾದ ಕಾರ್ಯದರ್ಶಿಯಾದರೇನು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದರೇನು, ದೇಶದಲ್ಲಿ ಹಾಗೂ ರಾಜ್ಯದಲ್ಲಿ ದಲಿತರ ಮೇಲೆ ನಡೆಯುವ ನಿರಂತರ ದೌ#ರ್ಜನ್ಯಕ್ಕೆ ಒಳಗಾಗುತ್ತಿರುವ ಪ್ರಕರಣಗಳ ವರದಿಯನ್ನು ಸರಿಯಾಗಿ ಓದಿ ಸರಕಾರದ ಧೋರಣೆಗಳನ್ನು ಖಂಡಿಸಿ ಹೇಳಿಕೆ ನೀಡಿ ಎಂದು ಸುಂದರ್ ಮಾಸ್ತರ್ ಆಗ್ರಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article