
ಮಣಿಪಾಲ ಮಂಚಿಯಲ್ಲಿ ಅ#ಗ್ನಿ ಅ#ವಘಡ: ಅಕೇಶಿಯಾ ಮರ, ಕಟ್ಟಿಗೆ ರಾಶಿ ಬೆಂ#ಕಿಗಾಹುತಿ
ಮಣಿಪಾಲ(Headlineskannada): ಇಲ್ಲಿನ 80 ಬಡಗಬೆಟ್ಟು ಗ್ರಾಮದ ಮಂಚಿ ರಾಜೀವನಗರದ ಮೀಸಲು ಅರಣ್ಯ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಅ#ಗ್ನಿ ಅ#ವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಕಾಡಿನಲ್ಲಿ ಹತ್ತಿಕೊಂಡ ಬೆಂ#ಕಿಯ ಕೆನ್ನಾಲಿಗೆ ಇಡೀ ಸುತ್ತಮುತ್ತಲಿನ ಪರಿಸರಕ್ಕೆ ವ್ಯಾಪಕವಾಗಿ ಹರಡಿದೆ. ಇದರಿಂದ ಸುತ್ತಮುತ್ತ ಪರಿಸರದಲ್ಲಿ ಕೆಲಕಾಲ ದಟ್ಟ ಹೊಗೆ ಆವರಿಸಿಕೊಂಡಿತ್ತು. ರಾಜೀವನಗರದ ರತ್ನ ಆಚಾರ್ಯ ಅವರ ಹಡಿಲು ಗದ್ದೆಯ ಹುಲ್ಲು ಗಾವಲು, ಮನೆಯೊಂದರ ಬಳಿ ರಾಶಿ ಹಾಕಿದ್ದ ಕಟ್ಟಿಗೆಯ ರಾಶಿ, ಕಾಡಿನ ಅಕೇಶಿಯ ಮರಗಳು ಬೆಂ#ಕಿಗೆ ಆ#ಹುತಿಯಾಗಿವೆ.
ಮೊದಲಿಗೆ ಕಾಡಿನಲ್ಲಿ ಕಾಣಿಸಿಕೊಂಡ ಬೆಂ#ಕಿಯ ಸಣ್ಣ ಕಿಡಿ, ನೋಡು ನೋಡುತ್ತಿದ್ದಂತೆ ವ್ಯಾಪಕವಾಗಿ ಹರಡಿದೆ. ರಾಜೀವನಗರದ 6ನೇ ಅಡ್ಡ ರಸ್ತೆಯ ಬಳಿಯ ಎರಡು ಎಕರೆಯಷ್ಟು ವ್ಯಾಪ್ತಿಯಲ್ಲಿ ಬೆಂ#ಕಿ ಅಟ್ಟಹಾಸ ಮೆರೆದಿದೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂ#ಕಿ ನಂದಿಸಿದರು. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.