
ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಬಜರಂಗದಳ ಮುಖಂಡನ ಶ#ವ ಪತ್ತೆ! ಮೃ#ತದೇಹ ಮೇಲೆಕ್ಕೆತ್ತಿದ ಸ್ಥಳೀಯ ಮುಸ್ಲಿಂ ಯುವಕರು!
ಬಂಟ್ವಾಳ(Headlineskannada): ಬಂಟ್ವಾಳದ ಪಾಣೆಮಂಗಳೂರು ಹಳೆ ಸೇತುವೆ ಬಳಿಯ ನೇತ್ರಾವತಿ ನದಿಯಲ್ಲಿ ಯುವಕನೋರ್ವನ ಮೃ#ತದೇಹ ಪತ್ತೆಯಾಗಿದ್ದು, ಇದು ಆ#ತ್ಮಹ#ತ್ಯೆಯೋ, ಅ#ಪಘಾತವೋ ಎಂಬುದು ದೃಢಪಟ್ಟಿಲ್ಲ.
ಮೃ#ತ ಯುವಕನನ್ನು ಬಂಟ್ವಾಳ ತಾಲೂಕಿನ ಸಜೀಪ ನಿವಾಸಿ ರಾಜೇಶ್ ಪೂಜಾರಿ(26) ಎಂದು ಗುರುತಿಸಲಾಗಿದೆ. ಈತ ಸಜೀಪ ವಿಶ್ವ ಹಿಂದೂ ಪರಿಷತ್ ಮುಖಂಡ, ಬಜರಂಗದಳ ಕಲ್ಲಡ್ಕ ಪ್ರಖಂಡ ಗೋ ರಕ್ಷಣಾ ಪ್ರಮುಖ್ ಆಗಿದ್ದ ಎಂದು ಹೇಳಲಾಗಿದೆ.
ಇಲ್ಲಿನ ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಇಂದು ಬೆಳಗ್ಗೆ ದ್ವಿಚಕ್ರ ವಾಹನವೊಂದು ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಅನಾಥ ಸ್ಥಿತಿಯಲ್ಲಿ ಬಿದ್ದುಕೊಂಡಿತು. ಈ ಬಗ್ಗೆ ಸಂಶಯಗೊಂಡ ಸಾರ್ವಜನಿಕರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಈ ವೇಳೆ ಅಲ್ಲಿಗೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ನದಿಯಲ್ಲಿ ಹುಡುಕಾಟ ನಡೆಸಿದಾಗ ರಾಜೇಶ್ ಪೂಜಾರಿಯ ಮೃ#ತದೇಹ ಪತ್ತೆಯಾಗಿದೆ.
ರಾಜೇಶ್ ಪೂಜಾರಿ ಮೃ#ತದೇಹ ಹುಡುಕಾಡಲು ಗೂಡಿನಬಳಿಯ ಮುಳುಗುತಜ್ಞರಾದ ಇಕ್ಬಾಲ್, ಮುಹಮ್ಮದ್, ಹಾರಿಸ್, ಇಬ್ರಾಹೀಂ ಎಂ.ಕೆ. ಹಾಗು ಇತರರು ನದಿಯಲ್ಲಿ ಶೋಧಕಾರ್ಯ ಮಾಡಿ ಮೃ#ತದೇಹ ಮೇಲಕ್ಕೆತ್ತಲು ಸಹಕರಿಸಿದರು.
ರಾಜೇಶ್ ಪೂಜಾರಿ ಆ#ತ್ಮಹ#ತ್ಯೆಯೋ ಅಥವಾ ಅಪಘಾತವೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.