ಕಹಿಯನ್ನು ಮರೆತು ಸಿಹಿಯತ್ತ ಸಾಗೋಣ...

ಕಹಿಯನ್ನು ಮರೆತು ಸಿಹಿಯತ್ತ ಸಾಗೋಣ...

2022 ಮುಕ್ತಾಯವಾಗಿ 2023 ಆರಂಭವಾಯಿತು.... ಕಹಿಗಳನ್ನು ಮರೆಯುವುದು ಸಿಹಿಗಳನ್ನು ನಿರೀಕ್ಷಿಸುವುದು ಸ್ವಾಭಾವಿಕ. ಕಳೆದ ವರ್ಷ ಹಲವು ದುಃಖದ ಸನ್ನಿವೇಶ, ಘಟನೆಗಳನ್ನು ನಾವು ನೋಡಿದ್ದೇವೆ. ರಷ್ಯಾ ಉಕ್ರೇನ್ ಯುದ್ಧ ; ಚೀನಾ ತವಾಂಗ್ ಘರ್ಷಣೆ; ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು; ಪಾಕಿಸ್ತಾನದ ರಾಜಕೀಯ ಗೊಂದಲ;  ಹಾಗೆಯೇ ದೇಶ ವಿದೇಶಗಳ ಬಗೆಗಿನ ಕಷ್ಟ ನಷ್ಟ , ನೋವು, ಆತಂಕಗಳು ಒಮ್ಮೆ ಕಣ್ಣ ಮುಂದೆ ಹಾದು ಹೋದುವು.

ಕೊರೊನಾದ ಆತಂಕದಿಂದ ಪಾರಾದೆವು ಎಂಬ ಸಮಾಧಾನ ಹೆಚ್ಚು ಕಾಲ ಉಳಿಯಲಿಲ್ಲ, ಮತ್ತೆ ಆತಂಕ ಶುರು ಆಗಿದೆ. ನಮ್ಮ ಆರ್ಥಿಕತೆ ತೃಪ್ತಿದಾಯಕವಾಗಿಲ್ಲ, ಪ್ರಭುತ್ವ ಜನಪರವಾಗಿಲ್ಲ, ವಾಕ್ ಸ್ವಾತಂತ್ರ್ಯಕ್ಕೆ  ಧಕ್ಕೆ ಉಂಟಾಗಿದೆ. ಶೈಕ್ಷಣಿಕ ಕ್ಷೇತ್ರಆಶಾದಾಯಕವಾಗಿಲ್ಲ, ಬಹುತ್ವ ಭಾರತಕ್ಕೆ ಆತಂಕ ಉಂಟಾಗಿದೆ. ಪ್ರಕೃತಿ, ಪರಿಸರ,ಮಳೆಬೆಳೆ,ಪರಸ್ಪರ ಪೂರಕವಾಗಿಲ್ಲ. ರಾಜ್ಯಗಳ ಗಡಿ ಸಮಸ್ಯೆ ಗೊಂದಲಮಯವಾಗಿದೆ.

ಎಲ್ಲವನ್ನೂ ಮರೆತುಬಿಡೋಣ. ನಾವು ಆಶಾವಾದಿಗಳಾಗಿರಬೇಕು, ಮನುಷ್ಯರ ಸ್ವಭಾವ,  ಹೆಚ್ಚು ಪ್ರೀತಿಯಿಂದ ಕೂಡಿರಬೇಕು,ದೇಶ,ಭಾಷೆಗಳನ್ನು ಗೌರವಿಸಬೇಕು. ಹೃದಯ, ಮನಸ್ಸುಗಳು ಹೆಚ್ಚು ಹತ್ತಿರವಾಗಬೇಕು. ಲಿಂಗ ತಾರತಮ್ಯ  ನಿವಾರಣೆಯಾಗಬೇಕು,ಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿ ಹೆಚ್ಚು ಪ್ರಾಯೋಗಿಕವಾಗಿರಬೇಕು. ನಮ್ಮ ಸಾಹಿತ್ಯ, ಸಂಸ್ಕೃತಿ ಜನಪರವಾಗಿರಬೇಕು. ಮತಧರ್ಮಗಳು ಜೀವನವಿಧಾನವಾಗಬೇಕು.

ಮನುಷ್ಯರಂತೆ ಗಿಡ,ಮರ,ಪ್ರಾಣಿಗಳನ್ನು ಪ್ರೀತಿಸಬೇಕು. ಚುನಾವಣೆಗಳ ಮೂಲಕ ಸರಕಾರಗಳ ರಚನೆ ಪ್ರಾಮಾಣಿಕವಾಗಿರಬೇಕು.ಪ್ರಜಾಪ್ರಭುತ್ವ ಹೆಚ್ಚು ಅರ್ಥವತ್ತಾಗಿರಬೇಕು. ಗಾಂಧಿ  ಅಂಬೇಡ್ಕರ್ , ಬುದ್ಧ ,ಬಸವಾದಿಗಳು ನಮೆಲ್ಲರ ಸಾಕ್ಷಿ ಪ್ರಜ್ಞೆಯಾಗಬೇಕು.

ಪ್ರೀತಿಯ, ಜಾತ್ಯತೀತ ಬದುಕನ್ನು ನಿರೀಕ್ಷಿಸುತ್ತಾ ಹೊಸ ವರ್ಷವನ್ನು ಆಶಾದಾಯಕವಾಗಿ ಬರಮಾಡಿಕೊಳ್ಳೋಣ....🙏

ಡಾ.‌ಇಸ್ಮಾಯಿಲ್ N(ನಿವೃತ್ತ ಪ್ರಾಂಶುಪಾಲರು, ಬದ್ರಿಯಾ ಪದವಿ ಪೂರ್ವ ಕಾಲೇಜು, ಮಂಗಳೂರು)

Ads on article

Advertise in articles 1

advertising articles 2

Advertise under the article