ಶ್ರೀ ನಾರಾಯಣಗುರು ನಿಗಮ ಮಂಡಳಿ ಘೋಷಣೆ ಸ್ವಾಗತಾರ್ಹ: ಸಚಿವ ಕೋಟ

ಶ್ರೀ ನಾರಾಯಣಗುರು ನಿಗಮ ಮಂಡಳಿ ಘೋಷಣೆ ಸ್ವಾಗತಾರ್ಹ: ಸಚಿವ ಕೋಟ




ಉಡುಪಿ (Headlines Kannada): ಬಿಲ್ಲವ ಸಮಾಜದ ಬಹುದಿನಗಳ ಬೇಡಿಕೆಯಂತೆ ಶ್ರೀ ನಾರಾಯಣಗುರು ನಿಗಮ ಮಂಡಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಹಲವಾರು ನಿಗಮಗಳನ್ನು ಕ್ರೂಢೀಕರಿಸಿದಂತೆ ಸಾಕಷ್ಟು ಅನುದಾನ ಮೀಸಲಿಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಲ್ಲವ ಅಭಿವೃದ್ಧಿ ನಿಗಮ‌ ಘೋಷಣೆ ಚುನಾವಣೆ ಗಿಮಿಕ್ ಎಂಬ ವಿನಯಕುಮಾರ್ ಸೊರಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರಕಾರ ಒಂದು ಯೋಜನೆ ಘೋಷಣೆ ಮಾಡಿದ್ರೆ, ಆರ್ಥಿಕ ಇಲಾಖೆ ಮೂಲಕ ಅನುದಾನ ನಿಗದಿ ಮಾಡುವ ಜವಾಬ್ದಾರಿ ಕೂಡ ಅದಕ್ಕೆ ಇದೆ. ಹಣಕಾಸು ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ಯಾವುದಾದ್ರೂ ಒಂದು ಯೋಜನೆ ಘೋಷಣೆ ಮಾಡಿದ್ರೆ, ಅದಕ್ಕೆ ಪೂರ್ಣಪ್ರಮಾಣದ ಹಣ ನಿಗದಿ ಮಾಡುವ ಅಧಿಕಾರ ಕೂಡ ಅವರಿಗಿದೆ. ಅದರಂತೆ ಇದೀಗ ನಾರಾಯಣಗುರುಗಳ ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದಾರೆ. ಇದನ್ನು ವಿನಯಕುಮಾರ್ ಸೊರಕೆ ಅವರು ಅರಿತುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

108 ಜಾತಿಗಳು ನಮ್ಮ ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ ಬರುತ್ತವೆ. ಆ ಪೈಕಿ ಬಹುತೇಕ ಜಾತಿಯವರು ನಮಗೊಂದು ಪ್ರತ್ಯೇಕ ನಿಗಮ ಕೊಡಿ ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಬೇರೆ ಸಮುದಾಯದ ಬೇಡಿಕೆ, ಒತ್ತಡಗಳನ್ನು ಗಮನಿಸಿಕೊಂಡು ನಿಗಮ ಘೋಷಣೆ ಮಾಡಲು ಸ್ವಲ್ಪ ವಿಳಂಬ ಆಗಿದೆ. ಆದರೆ ಕಡೆಗೂ ನಿಗಮ ಘೋಷಣೆ ಆಗಿರುವುದು ಸಮಾಧಾನದ ಸಂಗತಿ. ಅದಕ್ಕೆ ನಾನು ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article