ಬಾಲಿವುಡ್ನಲ್ಲಿ ಧೂಳೆಬ್ಬಿಸಿದ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ; ಈ ಗೆಲುವಿಗೆ ಐಎಸ್ಐ ಕಾರಣ ಎಂದ ನಟಿ ಕಂಗನಾ ರಣಾವತ್!
ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಬಾಕ್ಸ್ ಆಫೀಸ್'ನಲ್ಲಿ ಧೂಳಿಪಟ ಎಬ್ಬಿಸಿದ್ದು, ಎಲ್ಲ ದಾಖಲೆ ಮುರಿಯುವತ್ತ ಹೆಜ್ಜೆ ಇಟ್ಟಿದೆ. ಸಿನೆಮಾ ರಿಲೀಸ್ ಆದ ಮೂರೇ ಮೂರು ದಿನಕ್ಕೆ 150 ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಿಂದ ಕೊಳ್ಳೆ ಹೊಡೆದಿದೆ. ಸಿನೆಮಾವನ್ನು ದೇಶ-ವಿದೇಶಗಳ ಜನರೆಲ್ಲರೂ ಕೊಂಡಾಡುತ್ತಿದ್ದರೆ ನಟಿ ಕಂಗನಾ ರಣಾವತ್, ಪಠಾಣ್ ಸಿನಿಮಾ ಈ ಪ್ರಮಾಣದಲ್ಲಿ ಗೆಲ್ಲಲು ಐ.#ಎಸ್.ಐ ಕಾರಣವೆಂದು ಹೇಳಿ ನಗೆಪಾಟಲಿಗೀಡಾಗಿದ್ದಾರೆ.
ಪಠಾಣ್ ಸಿನಿಮಾ ವಿರುದ್ಧ ದೇಶಾದ್ಯಂತ ಸಂಘಪರಿವಾರದ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿದ್ದರೂ ಸಿನೆಮಾ ಮಾತ್ರ ಭರ್ಜರಿ ಹಿಟ್ ಕಂಡಿದೆ. ದೇಶದಲ್ಲಿ ನಡೆಯುತ್ತಿದ್ದ ಸಿನಿಮಾ ಬಾಯ್ಕಾಟ್ ಕಾರಣದಿಂದಾಗಿ ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಲಿದೆ ಎಂದು ಹೇಳಲಾಗಿತ್ತು. ಸಂಘಪರಿವಾರದ ಸಂಘಟನೆಗಳು ಅಲ್ಲಲ್ಲಿ ಗಲಾಟೆ ಮಾಡಿ, ಚಿತ್ರಕ್ಕೆ ಅಡ್ಡಿ ಪಡಿಸಿದರು. ದೇಶದ ಹಲವು ಕಡೆ ಸಿನಿಮಾ ರಿಲೀಸ್ ಆಗದಂತೆ ನೋಡಿಕೊಂಡರು. ಜೊತೆಗೆ ಕೆಲವು ರಾಜ್ಯಗಳು ಸಿನಿಮಾ ರಿಲೀಸ್ ಆಗದಂತೆ ನೋಡಿಕೊಂಡವು. ಆದರೂ ಪಠಾಣ್ ಚಿತ್ರವನ್ನು ಕಟ್ಟಿಹಾಕುವುದಕ್ಕೆ ಸಾಧ್ಯವಾಗಿಲ್ಲ, ಸಿನೆಮಾ ದಾಖಲೆ ಮೇಲೆ ದಾಖಲೆ ಮಾಡುತ್ತಿದೆ.
ಆದರೆ ಸಿನೆಮಾ ನಿರೀಕ್ಷೆಗೂ ಮೀರಿ ಗೆದ್ದಿರುವುದಕ್ಕೆ ದಿನಕ್ಕೊಂದು ಕಾರಣವನ್ನು ಕೊಡುತ್ತಿರುವ ಕಂಗನಾ ರಣಾವತ್, ಈಗ ಐ#ಎಸ್ಐ ಕೈವಾಡ ಸೇರಿದಂತೆ ಅನೇಕ ಆರೋಪಗಳನ್ನು ಅವರು ಮಾಡಿದ್ದಾರೆ. ಆದರೆ ಸಿನೆಮಾ ನಾಯಕ ನಟ ಶಾರುಖ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇವಲ ಸಿನೆಮಾ ಗೆಲುವಿಗೆ ಕಾರಣರಾದ ಎಲ್ಲರಿಗೂ ಅವರು ಧನ್ಯವಾದಗಳನ್ನು ಅರ್ಪಿಸಿದ್ದು, ತಾನೊಂದು ದೇಶಭಕ್ತಿ ಸಾರುವಂತಹ ಚಿತ್ರ ನೀಡಿರುವುದಾಗಿ ಅವರು ತಿಳಿಸಿದ್ದಾರೆ.