ರಾಜ್ಯದ ಸಚಿವರು ಅಲಿಬಾಬ 40 ಕ#ಳ್ಳರಿದ್ದಂತೆ; ಇವರ ಮುಖಕ್ಕೆ ಓಟು ಸಿಗುದಿಲ್ಲ ಅಂತ ಮೋದಿ, ಅಮಿತ್ ಶಾರನ್ನು ಕರೆದುಕೊಂಡು ಬರುತ್ತಿದ್ದಾರೆ: ಸಿದ್ದರಾಮಯ್ಯ ಲೇವಡಿ
ಯಾದಗಿರಿ: ರಾಜ್ಯದ ಸಚಿವರು ಅಲಿಬಾಬ 40 ಕ#ಳ್ಳರಿದ್ದಂತೆ; ಇವರ ಮುಖಕ್ಕೆ ಓಟು ಸಿಗುದಿಲ್ಲ ಅಂತ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ರಾಜ್ಯಕ್ಕೆ ಕರೆದುಕೊಂಡು ಬರುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ರಾಜ್ಯದ ಸಚಿವರ ಮುಖ ಅಳಸಿ ಹೋಗಿದೆ. ಇವರ ಆಡಳಿತವನ್ನು ನೋಡಿ ಜನ ರೋಸಿಹೋಗಿದ್ದಾರೆ. ಈಗ ಇವರಿಗೆ ಜನ ಬಡಗೆ ತೆಗೆದುಕೊಂಡು ಹೊಡೆಯುತ್ತಾರೆ ಎಂದು ಅವರು ಹೇಳಿದರು.
ಯಾದಗಿರಿ ನಗರದ ವನಕೇರಿ ಲೇಔಟ್ನಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರನ್ನ ಕರೆದುಕೊಂಡು ಕಾರ್ಯಕ್ರಮ ಮಾಡುವಂಥ ಪರಿಸ್ಥಿತಿಗೆ ಬಿಜೆಪಿ ಬಂದಿದೆ. ಇವರ ಕಾರ್ಯಕ್ರಮಕ್ಕೆ ಈಗ ಜನ ಬರುತ್ತಿಲ್ಲ ಎಂದರು.
ನಾವು ಯಾತ್ರೆಯ ಮೂಲಕ ರಾಜ್ಯ ಬಿಜೆಪಿ ಸರಕಾರದ ದುರಾಡಳಿತವನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡುತ್ತೇವೆ. ಜೊತೆಗೆ ನಮ್ಮ ಪಕ್ಷದಿಂದ ಬಿಜೆಪಿ ವಿರುದ್ಧದ ಚಾರ್ಜ್ ಶೀಟ್ ರಾಜ್ಯದ ಜನರ ಮುಂದೆ ಇಡುತ್ತಿದ್ದೇವೆ. ಬಿಜೆಪಿಯ ಪಾಪದ ಪುರಾಣ ಅಂತ ಚಾರ್ಜ್ ಶೀಟ್ಗೆ ಹೆಸರು ಇಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.