ಜ.13ರಿಂದ ಬೀಡಿನಗುಡ್ಡೆೆಯಲ್ಲಿ 'ಪವರ್ ಪರ್ಬ' ವಸ್ತು ಪ್ರದರ್ಶನ-ಮಾರಾಟ‌ ಮೇಳ

ಜ.13ರಿಂದ ಬೀಡಿನಗುಡ್ಡೆೆಯಲ್ಲಿ 'ಪವರ್ ಪರ್ಬ' ವಸ್ತು ಪ್ರದರ್ಶನ-ಮಾರಾಟ‌ ಮೇಳ




ಉಡುಪಿ(Headlineskannada): ಪವರ್ ಸಂಸ್ಥೆಯ ಉಡುಪಿ ಜಿಲ್ಲೆ ಇದರ 4ನೇ ಆವೃತ್ತಿಯ ಪವರ್ ಪರ್ಬ ವಸ್ತು ಪ್ರದರ್ಶನ ಮತ್ತು ಮಾರಾಟ‌ ಮೇಳವು ಬೀಡಿನಗುಡ್ಡೆೆಯ ಬಯಲು ರಂಗಮಂದಿರದಲ್ಲಿ ಇದೇ ಬರುವ ಜ.13ರಿಂದ 15ರವರೆಗೆ ನಡೆಯಲಿದೆ ಎಂದು ಪವರ್ ಸಂಸ್ಥೆೆಯ ಅಧ್ಯಕ್ಷೆೆ ಪೂನಂ ಶೆಟ್ಟಿ ಹೇಳಿದರು. 

ಉಡುಪಿಯಲ್ಲಿಂದು‌ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬೃಹತ್ ಮೇಳದಲ್ಲಿ 125ಕ್ಕೂ ಅಧಿಕ ಉತ್ಪನ್ನಗಳ, ಸೇವೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆೆ ಮಹಿಳೆಯರಿಗೆ ಅವಕಾಶ ಇರಲಿದೆ. ವಿಶಿಷ್ಟ ಆಹಾರ ಮಳಿಗೆಗಳು, ವಿಶೇಷ ಆಟದ ವಲಯ ಜತೆಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದರು.

ಜ.13ರಂದು ಸಂಜೆ 5.30ಕ್ಕೆೆ ಸಚಿವ ವಿ.ಸುನಿಲ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಅರ್ಚನಾ ರಾವ್, ಖಜಾಂಚಿ ಪ್ರತಿಭಾ ಆರ್.ವಿ., ಕಾರ್ಯಕ್ರಮ ಸಂಯೋಜಕಿ ಶಿಲ್ಪಾ ಶೆಟ್ಟಿ, ಸಂಘಟನ ಕಾರ್ಯದರ್ಶಿ ದೀನಾ ಪ್ರಭಾಕರ್, ಸಂಸ್ಥಾಪಕಿ ರೇಣು ಜಯರಾಂ, ಜತೆ ಕಾರ್ಯದರ್ಶಿ ತೃಪ್ತಿ ನಾಯಕ್, ಪುಷ್ಪಾ ಗಣೇಶ್ ರಾವ್ ಇದ್ದರು.

Ads on article

Advertise in articles 1

advertising articles 2

Advertise under the article