ಬೈಂದೂರು ಯಡ್ತರೆ: ಹೊಳೆಗೆ ಬಿದ್ದು 7 ವರ್ಷದ ಬಾಲಕ ಮೃ#ತ್ಯು
Wednesday, January 11, 2023
ಬೈಂದೂರು: ಹೊಳೆಗೆ ಬಿದ್ದು ಏಳು ವರ್ಷದ ಬಾಲಕನೋರ್ವ ಮೃ#ತಪಟ್ಟ ಘಟನೆ ಯಡ್ತರೆ ಗ್ರಾಮದ ಮದ್ದೋಡಿ ಎಂಬಲ್ಲಿ ಜ.10ರಂದು ಸಂಜೆ ನಡೆದಿದೆ.
ಮೃ#ತ ಬಾಲಕನನ್ನು ಯಡ್ತರೆ ಗ್ರಾಮದ ಮದ್ದೋಡಿ ನಿವಾಸಿ ಸುರೇಶ್ ಬಹುದೋರು ಹಾಗೂ ಬಸಂತಿ ದಂಪತಿಯ ಪುತ್ರ 7 ವರ್ಷ ಪ್ರಾಯದ ಅನಿಲ್ ಎಂದು ಗುರುತಿಸಲಾಗಿದೆ. ಸುರೇಶ್ ತನ್ನ ಹೆಂಡತಿ ಬಸಂತಿ, ಮಕ್ಕಳಾದ ಅರುಣ ಹಾಗೂ ಅನಿಲ ಜೊತೆಗೆ ಮದ್ದೋಡಿ ಕಲ್ಲೋಲಿಕಲ್ ಜೋಯ್ ಎಂಬವರ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ಸಂಜೆ ಬಸಂತಿ ಅವರು ತನ್ನ ಮಗ ಅನಿಲನೊಂದಿಗೆ ಜೋಯ್ ರವರ ತೋಟದ ಬದಿಯಲ್ಲಿರುವ ಮದ್ದೋಡಿ ಹೊಳೆಗೆ ಬಟ್ಟೆಯನ್ನು ಒಗೆಯಲು ಹೋಗಿದ್ದರು. ಸ್ವಲ್ಪ ಸಮಯದ ಬಳಿಕ ಬಸಂತಿ ಅವರು ಮಗ ಅನಿಲ್ ನನ್ನು ಮನೆಗೆ ಹೋಗುವಂತೆ ಹೇಳಿ ಕಳುಹಿಸಿದ್ದರು. ಅದರಂತೆ ಅನಿಲ್ ಮನೆಗೆ ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃ#ತಪಟ್ಟಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..