
ರಾಜಕೀಯ ದ್ವೇ#ಷದ ಹಿನ್ನೆಲೆಯಲ್ಲಿ ತಮ್ಮ ಮುಖಂಡನನ್ನೇ ಕೊಂ#ದ ಬಿಜೆಪಿ ಸದಸ್ಯರು; 7 ಮಂದಿಯ ಬಂಧನ
Thursday, January 12, 2023
ಅಹಮದಾಬಾದ್: ಪಕ್ಷದೊಳಗಿನ ವೈಷಮ್ಯ, ರಾಜಕೀಯ ದ್ವೇ#ಷದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಹಾರ್ದಿಕ್ ಪಟೇಲ್'ರನ್ನು ಬೆಂಬಲಿಸಿದ ವಿರಂಗಾಮ್‌ನ 45 ವರ್ಷದ ಬಿಜೆಪಿ ಮುಖಂಡ ಹರ್ಷದ್ ಗಮೋಟ್ ಎಂಬವರನ್ನು ಬಿಜೆಪಿ ಸದಸ್ಯರೇ ಹ#ತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹ#ತ್ಯೆಗೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತ ಭರತ್ ಕಥಿ ಸೇರಿದಂತೆ 7 ಮಂದಿಯನ್ನು ಬುಧವಾರ ಬಂ#ಧಿಸಲಾಗಿದೆ.
ಕಳೆದ 1 ವರ್ಷದ ಹಿಂದೆ ಗಮೋಟ್ ಅವರ ಪತ್ನಿ ಸೋನಾಲ್ ಅವರು ಪುರಸಭೆಯ ಕೌನ್ಸಿಲರ್ ಸ್ಥಾನಕ್ಕೆ ಅಭ್ಯರ್ಥಿಯಾದ ಬಳಿಕ ಹರ್ಷದ್ ಗಮೋಟ್ ಹಾಗು ಕಥಿ ನಡುವೆ ಭಿನ್ನಮತ ಶುರುವಾಗಿತ್ತು.
ಇದೇ ಕಾರಣಕ್ಕೆ ಮಂಗಳವಾರ ಸಂಜೆ ಹರ್ಷದ್‌ಕುಮಾರ್ ಗಮೋಟ್ ಅವರನ್ನು ಭರತ್ ಕಥಿ ಮತ್ತು ಅವರ 6 ಸಹಚರರು ಹಲವು ಬಾರಿ ಇ#ರಿದಿದ್ದಾರೆ. ಗಾಯಾಳು ಗಮೋಟ್ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಸಾ#ವನ್ನಪ್ಪಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಡಿಎಸ್ ಚೌಹಾಣ್ ತಿಳಿಸಿದ್ದಾರೆ.