
ದುಬೈಯಲ್ಲಿ "ಪಿಲಿ" ತುಳು ಚಿತ್ರದ ಪ್ರೀಮಿಯರ್ ಶೋ ಟಿಕೆಟ್ ಬಿಡುಗಡೆ; ಸಿನಿಮಾದ ಹಾಡು ಬಿಡುಗಡೆ
ದುಬೈ(Headlines Kannada): NNM ಪ್ರೊಡಕ್ಷನಲ್ಲಿ ದುಬೈಯ ಉದ್ಯೋಗಿಗಳಾದ ಆತ್ಮನಂದ ರೈ ಹಾಗು ಭರತ್ ರಾಮ್ ರೈ ನಿರ್ಮಾಣದ ಭರತ್ ಭಂಡಾರಿ ಮತ್ತು ಸ್ವಾತಿ ಶೆಟ್ಟಿ ನಾಯಕ ನಾಯಕಿಯಾರಗಿ ಅಭಿನಯದ "ಪಿಲಿ" ಚಿತ್ರದ ಯುಎಇಯ ಪ್ರಿಮಿಯರ್ ಶೋ ಟಿಕೆಟ್ ಬಿಡುಗಡೆ ಮತ್ತು ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ರವಿವಾರ ದುಬೈನಲ್ಲಿ ಜರುಗಿತು.
ನಗರದ ಫಾರ್ಚೂನ್ ಅಟ್ರ್ಯೂನ್ ನಲ್ಲಿ ಬಿಡುಗಡೆ ಕಾರ್ಯಕ್ರಮವನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಫಾರ್ಚೂನ್ ಗ್ರೂಪ್ ಸಂಸ್ಥೆಯ ರೂವರಿ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ಚಿತ್ರ ನಿರ್ಮಾಪಕರಾದ ಹರೀಶ್ ಶೇರಿಗಾರ್, ಹರೀಶ್ ಬಂಗೆರ,ಬಿಲ್ಲವಾಸ್ ನ ಸತೀಶ್ ಪೂಜಾರಿ, ಯಕ್ಷಗಾನ ಅಭ್ಯಾಸ ಕೇಂದ್ರದ ದಿನೇಶ್ ಶೆಟ್ಟಿ ಕೊಟಿಂಜರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯುಎಇಯ ದುಬೈ ಮತ್ತು ಅಬುಧಾಬಿಯಲ್ಲಿ ಫೆ. 4 ,5 ಮತ್ತು 11 ರಂದು ಬಿಡುಗಡೆಯಾಗುವ ಸಿನಿಮಾ ಪ್ರಿಮಿಯರ್ ಪ್ರದರ್ಶನದ ಟಿಕೆಟ್ ಗಳನ್ನು ಬಿಡುಗಡೆ ಮಾಡಿದ ಗಣ್ಯತಿ ಗಣ್ಯರು ಪಿಲಿ ಸಿನಿಮಾಕ್ಕೆ ನನ್ನ ಹಾಗೂ ನಮ್ಮ ಸಮಾಜದ ಮತ್ತು ನಮ್ಮ ಸಂಸ್ಥೆಗಳ ವತಿಯಿಂದ ಸಂಪೂರ್ಣವಾದ ಸಹಕಾರ ಇದೆ.ಸಿನಿಮಾ ನೂರು ದಿನ ಯಶಸ್ವಿಯಾಗಿ ಸಾಗಲಿ ಎಂದು ಹೇಳುತ್ತ ಸಿನಿಮಾಕ್ಕೆ ಶುಭವನ್ನು ಹಾರೈಸಿದರು.ಸಿನಿಮಾದ ಪ್ರಥಮ ಟಿಕೆಟನ್ನು ಸರ್ವೋತ್ತಮ ಶೆಟ್ಟಿಯವರು ಖರೀದಿಸಿ ಟಿಕೆಟ್ ಖರೀದಿಗೆ ಚಾಲನೆ ನೀಡಿದರು. ಪ್ರವಿಣ್ ಕುಮಾರ್ ಶೆಟ್ಟಿಯವರು ಸಿನಿಮಾದ ಒಂದು ಹಾಡನ್ನು ಬಿಡುಗಡೆಗೊಳಿಸಿದರು.ವೇದಿಕೆಯಲ್ಲಿ ನಟ,ನಿರ್ದೇಶಕ ವಿಜಯಕುಮಾರ್ ಕೋಡಿಯಲ್ ಬೈಲ್,ನಾಯಕ ನಾಯಕಿಯಾರದ ಭರತ್ ಭಂಡಾರಿ, ಸ್ವಾತಿ ಶೆಟ್ಟಿ, ನಿರ್ಮಾಪಕ ಆತ್ಮನಂದ ರೈ ದುಬೈ ಉಪಸ್ಥಿತರಿದ್ದರು.
ಬಿಡುಗಡೆ ಕಾರ್ಯಕ್ರಮದಲ್ಲಿ ಗಿರೀಶ್ ನಾರಯಣ್ ನೇತೃತ್ವದ ಹುಲಿ ವೇಷದ ಕುಣಿತ ಕಾರ್ಯಕ್ರಮಕ್ಕೆ ಮೆರುಗನ್ನು ತಂದಿತ್ತು.ರಾಜೇಶ್ ಕುತ್ತಾರ್ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸಿದರು. ನಿರ್ಮಾಪಕ ಆತ್ಮಾನಂದ ರೈ ಧನ್ಯವಾದವಿತ್ತರು.
ಮಣಿಕಾಂತ್ ಕದ್ರಿಯವರ ಸಂಗೀತ ಸಾರಥ್ಯದಲ್ಲಿ ಅಧ್ಭುತವಾದ ನಾಲ್ಕು ಹಾಡುಗಳಿವೆ.ತುಳುನಾಡಿನ ಕೋಗಿಲೆಗಳ ಗಾಯನ : ಪಟ್ಲ ಸತೀಶ್ ಶೆಟ್ಟಿ, ನಿಹಾಲ್ ತಾವ್ರ್ರೊ ಅನುರಾಧ ಭಟ್, ಕಲಾವತಿ, ಉಜ್ವಲ ಆಚಾರ್, ಮುಂತಾದವರು ಹಾಡಿದ್ದಾರೆ. ಪಟ್ಲ ಸತೀಶ್ ಶೆಟ್ಟಿಯವರ ಕಂಠ ಸಿರಿಯಲ್ಲಿ ಮೂಡಿ ಬಂದ ಶೀರ್ಷಿಕೆ ಗೀತೆಯು ಬಿಡುಗಡೆಗೊಂಡಿದ್ದು ಎಲ್ಲಾ ಕಡೆ ಸದ್ದು ಮಾಡುತ್ತಿದೆ.
ಈ ಚಿತ್ರದ ತಾರಾಗಣದಲ್ಲಿ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿ ದ್ದಾರೆ. ತ್ರಿಷಾ ಶೆಟ್ಟಿ, ಕೃತಿ ಶೆಟ್ಟಿ, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್, ಸ್ವರಾಜ್ ಶೆಟ್ಟಿ, ಸಂತೋಷ್ ಶೆಟ್ಟಿ, ರೂಪ ಡಿ ಶೆಟ್ಟಿ, ನಮಿತಾ ಕೂಳೂರು, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್‌ಶೆಟ್ಟಿ ಮಾಣಿಬೆಟ್ಟು, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ ಸೇರಿದಂತೆ ಹಲವಾರು ಪ್ರಭುದ್ಧ ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದಾರೆ. .
ಗಣೇಶ್ ನೀರ್ಚಾಲ್ ಅವರ ಸಂಕಲನ ಈ ಚಿತ್ರಕ್ಕಿದೆ. ಸುಂದರವಾದ ನಾಲ್ಕು ಹಾಡುಗಳಿಗೆ ಮಯೂರ್ ಆರ್. ಶೆಟ್ಟಿ, ಡಿ.ಬಿ.ಸಿ ಶೇಖರ್ ಮತ್ತು ಕೆ.ಕೆ. ಪೇಜಾವರ್ ಸಾಹಿತ್ಯ ಬರೆದಿದ್ದಾರೆ. ಈ ಚಿತ್ರಕ್ಕೆ ಸಂದೇಶ್ ಬಿಜೈ ಸಂಭಾಷಣೆ ಬರೆದಿದ್ದು, ನಿರ್ದೇಶನ ತಂಡದಲ್ಲಿ ಚಿತ್ರ ನಿರ್ದೇಶಕ ತ್ರಿಶೂಲ್ ಶೆಟ್ಟಿ, ಸಂದೇಶ್ ಬಿಜೈ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ. ಪ್ರಚಾರ ಕಲೆ ವಿನ್ಯಾಸ ದೇವಿ ರೈಯವರದ್ದಾಗಿದೆ.
ವಿಜಯಕುಮಾರ್ ಶೆಟ್ಟಿ, ಗಾಣದಮೂಲೆ ಮಜಿಬೈಲ್ (ದುಬೈ)