ಪಿರಿಯಾಪಟ್ಟಣ ಚರ್ಚ್‌​ ಮೇಲಿನ ದಾ#ಳಿ: ಆರೋಪಿ ಬಂಧನ; ಆರೋಪಿಯ ಸುಳಿವು ನೀಡಿದ ಹ್ಯಾಂಡ್ ಗ್ಲೌಸ್ !

ಪಿರಿಯಾಪಟ್ಟಣ ಚರ್ಚ್‌​ ಮೇಲಿನ ದಾ#ಳಿ: ಆರೋಪಿ ಬಂಧನ; ಆರೋಪಿಯ ಸುಳಿವು ನೀಡಿದ ಹ್ಯಾಂಡ್ ಗ್ಲೌಸ್ !

ಮೈಸೂರು(Headlines Kannada): ಇತ್ತೀಚಿಗೆ ನಡೆದ ಪಿರಿಯಾಪಟ್ಟಣದ  ಸೆಂಟ್‌ ಮೇರಿಸ್ ಚರ್ಚ್‌​ ಮೇಲಿನ ದಾ#ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚರ್ಚ್‌ನಲ್ಲಿ ದಾ#ಳಿ ವೇಳೆ ಹಣದ ಹುಂಡಿಯನ್ನು ಕ#ಳವು ಮಾಡಲಾಗಿತ್ತು. ಪ್ರಕರಣವನ್ನು ಪೊಲೀಸರು ಗಂ#ಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ್ದು, ಕೃ#ತ್ಯಕ್ಕೆ ಬಳಸಿದ್ದ ನೀಲಿಬಣ್ಣದ ಹ್ಯಾಂಡ್ ಗ್ಲೌಸ್ ಆರೋಪಿಯನ್ನು ಜೈ#ಲು ಸೇರುವಂತೆ ಮಾಡಿದೆ.

ಪಿರಿಯಾಪಟ್ಟಣ ಮಹದೇಶ್ವರ ಬಡಾವಣೆಯ ವಿಶ್ವ (24) ಎಂಬಾತನೇ ಈ ಕೃ#ತ್ಯದ ಆರೋಪಿಯಾಯಾಗಿದ್ದಾನೆ. ಪಿರಿಯಾಪಟ್ಟಣದ ಸೇಂಟ್‌ ಮೇರಿಸ್‌ ಚರ್ಚ್‌ ಮೇಲೆ ಡಿ.27ರಂದು ದಾ#ಳಿ ನಡೆದಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. 

ಚರ್ಚಿನೊಳಗೆ ಪೌರಕಾರ್ಮಿಕರು ಬಳಸುವ ನೀಲಿ ಬಣ್ಣದ ಗ್ಲೌಸ್‌ ಪತ್ತೆಯಾಗಿತ್ತು. ಇದರ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಗ್ಲೌಸ್‌ ಆರೋಪಿಯ ಸುಳಿವನ್ನು ನೀಡಿತ್ತು. ಸ್ಥಳೀಯರೇ ಈ ಕೃ#ತ್ಯ ಎಸಗಿರುವ ಶಂಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಚರ್ಚ್‌ನಿಂದ 500 ಮೀಟರ್‌ ದೂರದಲ್ಲಿರುವ ಪೌರಕಾರ್ಮಿಕರ ಕಾಲೊನಿಗೆ ತೆರಳಿ ಮಾಹಿತಿ ಕಲೆಹಾಕಿದ್ದರು.

ಆರೋಪಿ ವಿಶ್ವನನ್ನು ವಿಚಾರಣೆಗೆ ಒಳಪಡಿಸಿದಾಗ, ಹಣ ಕ#ಳವು ಉದ್ದೇಶದಿಂದ ಈ ಕೃ#ತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಸೀಮಾ ಲಾಟ್ಕರ್‌ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚರ್ಚ್‌ನಲ್ಲಿ ಕೆಲಸ ಮಾಡಿದ್ದರೂ ಆಗಿನ ಪಾದ್ರಿ ಅವರು ವಿಶ್ವನಿಗೆ ವೇತನ ನೀಡಿರಲಿಲ್ಲ. ಹಣಕ್ಕಾಗಿ ಆತ ಪದೇ ಪದೇ ಬಂದು ವಿಚಾರಿಸುತ್ತಿದ್ದ. ಈ ಮಧ್ಯೆ ಚರ್ಚಿನ ಪಾದ್ರಿ ವರ್ಗಾವಣೆಯಾಗಿದ್ದರು. ಚರ್ಚ್‌ನ ಸಂಪೂರ್ಣ ಮಾಹಿತಿ ಅರಿತಿದ್ದ ವಿಶ್ವ,  ಹಿಂಬಾಗಿಲಿನಿಂದ ಒಳಪ್ರವೇಶಿಸಿ ಕೃ#ತ್ಯ ಎಸಗಿದ್ದಾನೆ ಎಂದು SP ಹೇಳಿದರು.

ಮೊನ್ನೆ ನಡೆದ ಕ್ರಿಸ್ ಮಸ್ ಸಂಧರ್ಭದಲ್ಲಿ ಫಾದರ್ ಜೊತೆ ಮಾತನಾಡಲು ಚರ್ಚ್​​ಗೆ ಬಂದಿದ್ದ ಆರೋಪಿಗೆ ಈ ವೇಳೆ ಫಾದರ್ ಭೇಟಿಯ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಹುಂಡಿ ಕ#ಳ್ಳತನ ಮಾಡಲು ನಿರ್ಧಾರ ಮಾಡಿದ್ದ ಆತ, 3 ಹುಂಡಿಗಳಿಂದ ಕ#ಳ್ಳತನ ಮಾಡಿದ್ದು, ಅಂದಾಜು 2 ರಿಂದ 3 ಸಾವಿರ ಹಣ ಕ#ಳ್ಳತನ ಮಾಡಿದ್ದಾನೆ. ಈ ವೇಳೆ ಟೇಬಲ್ ಮೇಲಿದ್ದ ಬಾಲ ಏಸುವಿನ ಮೂರ್ತಿ ಕೆಳಗೆ ಹಣ ಇರಬಹುದು ಎಂದು ಬಟ್ಟೆ ಎಳೆದಿದ್ದಾನೆ. ಈ ವೇಳೆ ಬಾಲ ಏಸುವಿನ ಮೂರ್ತಿ ಒ#ಡೆದಿದೆ ಎಂದು ಸೀಮಾ ಲಾಟ್ಕರ್ ತಿಳಿಸಿದರು.

ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಈತ, ಗುಜರಿ ವಸ್ತುಗಳನ್ನು ಕ#ಳ್ಳತನ ಮಾಡಿ ಮಾರಿದ್ದ ಕಾರಣದಿಂದ ಆ ಕೆಲಸದಿಂದಲೂ 2 ತಿಂಗಳ ಹಿಂದೆ ತೆಗೆದು ಹಾಕಲಾಗಿತ್ತು. ಚರ್ಚ್‌ನಲ್ಲಿCCTV ಕ್ಯಾಮೆರಾ ಇರದ ಕಾರಣ, ಆರೋಪಿಯನ್ನು ಪತ್ತೆ ಹಚ್ಚುವುದು ಸವಾಲಿನಿಂದ ಕೂಡಿತ್ತು ಎಂದು SP ಹೇಳಿದರು.

Ads on article

Advertise in articles 1

advertising articles 2

Advertise under the article