
ಬೆಳ್ಮಣ್; ಹಾಡಿಯಲ್ಲಿ ವ್ಯಕ್ತಿ ನೇ#ಣು#ಬಿಗಿದುಕೊಂಡು ಆ#ತ್ಮ#ಹ#ತ್ಯೆ
Monday, January 2, 2023
ಬೆಳ್ಮಣ್(Headlines Kannada): ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಹಾಡಿಯಲ್ಲಿ ಮರಕ್ಕೆ ನೇ#ಣು#ಬಿಗಿದುಕೊಂಡು ಆ#ತ್ಮ#ಹ#ತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದಲ್ಲಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ 44ವರ್ಷದ ವಿರೇಂದ್ರ ಆ#ತ್ಮ#ಹ#ತ್ಯೆ ಮಾಡಿಕೊಂಡ ವ್ಯಕ್ತಿ. ಇವರು ವಿಪರೀತ ಮ#ದ್ಯಸೇವನೆ ಮಾಡುವ ಅಭ್ಯಾಸ ಹೊಂದಿದ್ದು, ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದರು. ಡಿ.30ರಂದು ಬೆಳ್ಮಣ್ ಗ್ರಾಮದ ಜಂತ್ರದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಜೀವನದಲ್ಲಿ ಮಾನಸಿಕವಾಗಿನೊಂದಿದ್ದ ವಿರೇಂದ್ರ ಅವರು, ಡಿ.31ರ ಬೆಳಿಗ್ಗೆಯಿಂದ ಜ.2ರ ಬೆಳಿಗ್ಗೆ 8ರ ಮಧ್ಯಾವಧಿಯಲ್ಲಿ ಸಂಬಂಧಿಕರ ಮನೆಯ ಬಳಿಯ ಹಾಡಿಯಲ್ಲಿ ನೇ#ಣು ಬಿಗಿದು ಆ#ತ್ಮ#ಹ#ತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.