ಗೃಹ ಸಚಿವ ಆರಗ ಜ್ಞಾನೇಂದ್ರರ ಮನೆಯ ಮುಂದೆಯೇ ಆ#ತ್ಮಹ#ತ್ಯೆಗೆ ಯತ್ನಿಸಿದ ಭದ್ರತಾ ಪೊಲೀಸ್ ಪೇದೆ !

ಗೃಹ ಸಚಿವ ಆರಗ ಜ್ಞಾನೇಂದ್ರರ ಮನೆಯ ಮುಂದೆಯೇ ಆ#ತ್ಮಹ#ತ್ಯೆಗೆ ಯತ್ನಿಸಿದ ಭದ್ರತಾ ಪೊಲೀಸ್ ಪೇದೆ !



ಬೆಂಗಳೂರು(Headlineskannada): ಗೃಹ ಸಚಿವ ಆರಗ ಜ್ಞಾನೇಂದ್ರರ ಭಧ್ರತೆಗಾಗಿ ನಿಯೋಜಿಸಿದ್ದ ಪೊಲೀಸ್​ ಪೇದೆಯೊಬ್ಬ ಅವರ ಮನೆಯ ಮುಂದೆಯೇ ಆ#ತ್ಮಹ#ತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಹೆಗಡೆ ನಗರದ ನಿವಾಸಿ ನವೀನ್‌ ಕುಮಾರ್‌ (25) ಆ#ತ್ಮಹ#ತ್ಯೆ ಯತ್ನಿಸಿದ ಪೊಲೀಸ್ ಪೇದೆಯಾಗಿದ್ದು, ಚಾಕುವಿನಿಂದ ತನ್ನ ಕೈ ಕೊ#ಯ್ದುಕೊಂಡು ಸಾ#ಯಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

ಯಾವ ಕಾರಣಕ್ಕಾಗಿ ಆ#ತ್ಮಹ#ತ್ಯೆಗೆ ಯತ್ನಿಸಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ. ಕೃ#ತ್ಯ ಎಸಗಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. 

ಜಯಮಹಲ್‌ ರಸ್ತೆಯಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಧಿಕೃತ ಸರ್ಕಾರಿ ನಿವಾಸದ ಭದ್ರತಾ ಕರ್ತವ್ಯದಲ್ಲಿ ನಿರತರಾಗಿದ್ದ ವೇಳೆ ನವೀನ್‌ ಆ#ತ್ಮಹ#ತ್ಯೆಗೆ ಯತ್ನಿಸಿದ್ದಾರೆ. ಸಚಿವರ ಮನೆ ಮುಂದೆ ಬೆಳಗ್ಗೆ ಸುಮಾರು 9.45ರ ವೇಳೆಗೆ ತನ್ನ ಎಡಗೈ ಕು#ಯ್ದುಕೊಂಡು ನಿತ್ರಾಣನಾಗಿ ನವೀನ್‌ ಕು#ಸಿದು ಬಿದ್ದಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article