
ಸಿದ್ಧೇಶ್ವರ ಸ್ವಾಮೀಜಿಯ ಅಗಲುವಿಕೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ: ಪುತ್ತಿಗೆ ಶ್ರೀ ಸಂತಾಪ
Tuesday, January 3, 2023
ಉಡುಪಿ(Headlines Kannada): ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರ ನಿ#ಧನದ ವಾರ್ತೆ ಕೇಳಿ ಮನಸ್ಸಿಗೆ ತುಂಬಾ ಆಘಾತ ಆಗಿದೆ. ಶ್ರೀಗಳು ಸಮಾಜದ ವಿಶೇಷವಾದ ಧರ್ಮಜಾಗೃತಿ ಮೂಡಿಸಿದ ಶ್ರೇಷ್ಠ ಸಂತರಾಗಿದ್ದಾರೆ. ಆಧ್ಯಾತ್ಮ ಗುರುಗಳಾಗಿದ್ದಾರೆ.ಅವರ ಅಗಲುವಿಕೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಸಂತಾಪ ಸೂಚಿಸಿದರು.
35 ವರ್ಷಗಳಿಂದ ಅವರು ತಮಗೆ ಅತ್ಯಂತ ಆತ್ಮೀಯರಾಗಿದ್ದರು. ಅವರ ಅನೇಕ ವಚನ ಮಾಲಿಕೆಗಳನ್ನು ನಾನು ಉದ್ಘಾಟಿಸಿದ್ದು, ಅಂಥಾ ಶ್ರೇಷ್ಠ ಸಂತನ ಅಗಲುವಿಕೆ ವೈಯಕ್ತಿಕವಾಗಿ ಬಹಳಷ್ಟು ದುಃಖವಾಗಿದೆ. ಅವರ ಅಪಾರ ಸಂಖ್ಯೆಯ ಭಕ್ತ ವೃಂದಕ್ಕೆ ಶ್ರೀಗಳ ಅಗಲುವಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.