ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಗುಜರಾತ್​ನಲ್ಲಿ ಬಂ#ಧನ

ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಗುಜರಾತ್​ನಲ್ಲಿ ಬಂ#ಧನಅಹಮ್ಮದಾಬಾದ್: ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಕೆ.ಎಸ್.ಮಂಜುನಾಥ ಅಲಿಯಾಸ್  'ಸ್ಯಾಂಟ್ರೋ' ರವಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸ್ಯಾಂಟ್ರೋ ರವಿಯನ್ನು ದೂರದ ಗುಜರಾತ್​ನಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಅ#ನೈ#ತಿಕ ದಂ#ಧೆ ಹಾಗೂ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.  

ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಗಾಗಿ ಬಲೆ ಬೀಸಿದ ಮೈಸೂರು ಪೊಲೀಸರು, ಕೊನೆಗೂ ಶುಕ್ರವಾರ ಗುಜರಾತ್ ನಲ್ಲಿ ಬಂಧಿಸಿದ್ದಾರೆ. 

ತನ್ನ ಬಳಿ ಇದ್ದ ಫೋನನ್ನು ಬಳಸದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತ ತಲೆಮರೆಸಿಕೊಂಡಿದ್ದ  ಸ್ಯಾಂಟ್ರೋ ರವಿಯ ಚಲನವಲನಗಳನ್ನು ಪತ್ತೆ ಮಾಡಲು ಪೊಲೀಸರು ಸೈಬರ್‌ ತಾಂತ್ರಿಕ ನೆರವು ಪಡೆದುಕೊಂಡಿದ್ದರು. ಕೊನೆಗೂ ಗುಜರಾತ್‌ನಲ್ಲಿ ಇದ್ದಾನೆ ಎಂಬ ಸುಳಿವು ಸಿಕ್ಕ ಕೂಡಲೇ ಗುಜರಾತ್‌ಗೆ ಧಾವಿಸಿದ ಮೈಸೂರು ಪೊಲೀಸರ ವಿಶೇಷ ತಂಡ, ಆತನನ್ನು ಬಂಧನ ಮಾಡಿದೆ. ಆರೋಪಿ ಸ್ಯಾಂಟ್ರೋ ರವಿಯನ್ನು ಕರ್ನಾಟಕಕ್ಕೆ ಕರೆತರಲಾಗುತ್ತಿದೆ.

Ads on article

Advertise in articles 1

advertising articles 2

Advertise under the article