ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದು ಪ್ರಯಾಣಿಕರಿಗೆ ಅಪಾಯ ತಂದಿಟ್ಟ ತೇಜಸ್ವಿ ಸೂರ್ಯ; ತನಿಖೆಗೆ ಆದೇಶ ನೀಡಿದ ಡಿಜಿಸಿಎ
ನವದೆಹಲಿ: ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಒಣದಲ್ಲ ಒಂದು ರೀತಿಯ ಕಿರಿಕ್ ಮಾಡಿ ಸುದ್ದಿಯಾಗುತ್ತಲೇ ಬಂದಿದ್ದು, ಇದೀಗ ಇಂಡಿಗೋ ವಿಮಾನ ಟೇಕಾಫ್ ವೇಳೆ 'ಎಮರ್ಜೆನ್ಸಿ ಡೋರ್' ತೆಗೆಯುವ ಮೂಲಕ ಸುದ್ದಿಯಲ್ಲಿದ್ದಾರೆ.
ಇಂಡಿಗೋ ಏರ್‌ಲೈನ್ಸ್ ಮಂಗಳವಾರ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, 1 ತಿಂಗಳ ಹಿಂದೆ ಚೆನ್ನೈನಿಂದ ತಿರುಚಿರಾಪಳ್ಳಿಗೆ ಪ್ರಯಾಣಿಕನೊಬ್ಬ ಇಂಡಿಗೋ ವಿಮಾನದ 6E 7339 ರಲ್ಲಿ ATR ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಆಕಸ್ಮಿಕವಾಗಿ ಅನ್ಲಾಕ್ ಮಾಡಿದ್ದರು.
ತುರ್ತು ನಿರ್ಗಮನ ದ್ವಾರವನ್ನು ಓಪನ್ ಮಾಡಿದ ಪ್ರಯಾಣಿಕ ಬೆಂಗಳೂರು ದಕ್ಷಿಣ ಕ್ಷೇತ್ರದ BJPಪಿ ಸಂಸದ ಹಾಗೂ BJP ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ DGCA ಅಥವಾ ಇಂಡಿಗೋ ವಿಮಾನ ಸಂಸ್ಥೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ವಿಮಾನದಲ್ಲಿ ತುರ್ತು ನಿರ್ಗಮನವನ್ನು ಪ್ರಯಾಣಿಕರೊಬ್ಬರು ತೆರೆದಿದ್ದಾರೆ, ಅಂದರೆ ಸಂಸದ ತೇಜಸ್ವಿ ಸೂರ್ಯ ತೆರೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು BJP ಸಂಸದನ ಮೇಲೆ ಆರೋಪ ಮಾಡಿದ್ದಾರೆ. ತುರ್ತು ನಿರ್ಗಮನವನ್ನು ತೆರೆದವರು ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತ್ಯಕ್ಷದರ್ಶಿಯೊಬ್ಬರು, ವಿಮಾನದಲ್ಲಿ ಅನುಸರಿಸಬೇಕಾದ ಸುರಕ್ಷತಾ ಪ್ರೋಟೋಕಾಲ್ ಬಗ್ಗೆ ಕ್ಯಾಬಿನ್ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿಸುತ್ತಿದ್ದರು. ಈ ವೇಳೆ ತೇಜಸ್ವಿ ಸೂರ್ಯ ಅವರು ತುರ್ತು ನಿರ್ಗಮನದ ಬಳಿ ಕುಳಿತಿದ್ದರು ಹಾಗು ಕಡ್ಡಾಯ ತುರ್ತು ಕಾರ್ಯವಿಧಾನಗಳ ಬಗ್ಗೆಯೂ ಅವರಿಗೆ ತಿಳಿಸಲಾಯಿತು. ಇದನ್ನೆಲ್ಲಾ ತೇಜಸ್ವಿ ಸೂರ್ಯ ಕೂಡ ಆಲಿಸುತ್ತಿದ್ದರು. ಆದರೆ ಕೆಲವು ನಿಮಿಷಗಳ ಬಳಿಕ ಇದ್ದಕ್ಕಿದ್ದಂತೆ ಅವರು ಲಿವರ್ ಅನ್ನು ಎಳೆದು, ತುರ್ತು ನಿರ್ಗ ತುರ್ತು ನಿರ್ಗಮನವನ್ನು ತೆರೆಯಲಾಯಿತು. ತಕ್ಷಣ, ನಮ್ಮೆಲ್ಲರನ್ನೂ ಕೆಳಗಿಳಿಸಿ ಬಸ್ಸಿನಲ್ಲಿ ಕುಳಿತುಕೊಳ್ಳುವಂತೆ ಆದೇಶಿಸಲಾಯಿತು ಎಂದು ತಿಳಿಸಿದ್ದಾರೆ.
ಏರ್‌ಲೈನ್ ಅಧಿಕಾರಿಗಳು ಹಾಗು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸ್ಥಳಕ್ಕೆ ಆಗಮಿಸಿದರು ಹಾಗೂ ಮತ್ತೆ ವಿಮಾನ ಹಾರಾಟ ಆರಂಭಿಸಲು ಕನಿಷ್ಠ 2 ಗಂಟೆಗಳ ಕಾಲ ಬೇಕಾಯಿತು. ಈ ಎಲ್ಲ ಘಟನೆ ನಡೆಯುವಾಗ ತೇಜಸ್ವಿ ಸೂರ್ಯ ಅವರೊಂದಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಕೂಡ ಇದ್ದರು ಎಂದು ಹೇಳಲಾಗಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಸಿಎ ತನಿಖೆಗೆ ಆದೇಶಿಸಿದ್ದು, ಅಲ್ಲದೆ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.