ಉಡುಪಿ ಟೌನ್ ಹಾಲ್ ಬಳಿ ಮಾ#ದಕ ದ್ರ#ವ್ಯ, ಗಾಂ#ಜಾ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

ಉಡುಪಿ ಟೌನ್ ಹಾಲ್ ಬಳಿ ಮಾ#ದಕ ದ್ರ#ವ್ಯ, ಗಾಂ#ಜಾ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

ಉಡುಪಿ (Headlineskannada): ಉಡುಪಿ ಟೌನ್ ಹಾಲ್ ಬಳಿಯ ರಿಕ್ಷಾ ನಿಲ್ದಾಣದ ಬಳಿ ಮಾ#ದಕ ದ್ರ#ವ್ಯ ಹಾಗೂ ಗಾಂ#ಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಅಪಾರ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಹಿರಿಯಡಕ ಗ್ರಾಮದ ಬೆಲ್ಲರ್ಪಾಡಿ ನಿವಾಸಿ 41ವರ್ಷದ ರಾಘವೇಂದ್ರ ದೇವಾಡಿಗ ಹಾಗೂ 80ಬಡಗಬೆಟ್ಟು ಗ್ರಾಮದ ವಾಗ್ಲೆ ಸ್ಟೋರ್ ಬಳಿಯ ನಿವಾಸಿ 32ವರ್ಷದ ಜಗದೀಶ್ ಪೂಜಾರಿ ಎಂದು ಗುರುತಿಸಲಾಗಿದೆ. 

ಖಚಿತ ಮಾಹಿತಿ ಮೇರೆಗೆ ಜ.16ರಂದು ಉಡುಪಿಯ ಟೌನ್ ಹಾಲ್ ಸಮೀಪದ ರಿಕ್ಷಾ ನಿಲ್ದಾಣದ ಬಳಿ ದಾಳಿ ಮಾಡಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 45ಸಾವಿರ ಮೌಲ್ಯದ 10 ಗ್ರಾಂ ತೂಕದ ಮಾ#ದಕ ದ್ರ#ವ್ಯ, 28 ಸಾವಿರ ರೂ ಮೌಲ್ಯದ 1 ಕೆ.ಜಿ 176 ಗ್ರಾಂ ತೂಕದ ಗಾಂ#ಜಾ ಹಾಗೂ ನೋಂದಣಿ ಸಂಖ್ಯೆ ಇಲ್ಲದ ಸ್ಕೂಟರ್, 2 ಮೊಬೈಲ್ ಫೋನ್ ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article