ಮಲ್ಪೆ ಸೈಂಟ್ ಮೆರೀಸ್ ದ್ವೀಪದಲ್ಲಿ ಪ್ರವಾಸಿಗರೊಂದಿಗೆ ಸಿಬ್ಬಂದಿಯ ದು#ವರ್ತನೆ: ಆಕ್ರೋಶ ಹೊರ ಹಾಕಿದ ಪ್ರವಾಸಿಗ
ಉಡುಪಿ(Headlineskannada): ಉಡುಪಿಯ ಪ್ರಸಿದ್ಧ ಪ್ರವಾಸಿ ತಾಣ ಸೈಂಟ್ ಮೇರೀಸ್ ದ್ವೀಪದ ಸಿಬ್ಬಂದಿಯೊಬ್ಬರು ಪ್ರವಾಸಿಗರ ಮೇಲೆ ದರ್ಪ ಪ್ರದರ್ಶಿಸದ ಘಟನೆ ಬೆಳಕಿಗೆ ಬಂದಿದೆ.
ಪ್ರವಾಸಿಗ ಕಮ್ ಯೂಟ್ಯೂಬರ್ ಓರ್ವರು ಇಲ್ಲಿಗೆ ಆಗಮಿಸಿದ್ದರು. ಸೈಂಟ್ ಮೇರೀಸ್ ದ್ವೀಪದ ಒಳಗಡೆ ಕ್ಯಾಮೆರಾಕ್ಕೆ ನಿಷೇಧ ಇದ್ದು ಒಳಗಡೆ ಒಯ್ಯುವಂತಿಲ್ಲ. ಶುಲ್ಕ ಪಾವತಿಸಿ ಲಗೇಜು ರೂಮ್‌ನಲ್ಲಿ ಕ್ಯಾಮೆರಾ ಇಡಬಹುದು ಎಂದು ಅಲ್ಲಿಯ ಸಿಬ್ಬಂದಿ ಹೇಳಿದ್ದಾರೆ. ಆದರೆ ಸೇಫ್ ಆಗಿ ಇಡಲು ಸರಿಯಾದ ವ್ಯವಸ್ಥೆ ಕೂಡ ಅಲ್ಲಿರಲಿಲ್ಲ. ಬಾಗಿಲೇ ಇಲ್ಲದ ರೂಮ್‌ನಲ್ಲಿ ಲಕ್ಷಾಂತರ ಮೌಲ್ಯದ ಕ್ಯಾಮೆರಾ ಇಡುವುದು ಹೇಗೆ ಎಂದು ಪ್ರವಾಸಿಗ ಪ್ರಶ್ನಿಸಿದ್ದಾರೆ. ಈ ವೇಳೆ ಅಲ್ಲಿಯ ಸಿಬ್ಬಂದಿ ಕ್ಯಾಮೆರಾವನ್ನೇ ತೆಗೆದು ಬಿಸಾಡುತ್ತೇನೆ ಎಂದು ಬೆ#ದರಿಕೆ ರೀತಿಯಲ್ಲಿ ಉ#ಡಾಫೆ ಮಾತಾಡಿದ್ದಾನೆ. ಅನತಿ ದೂರದಲ್ಲಿರುವ ಸೀ ವಾಕ್‌ನಲ್ಲಿ ಕ್ಯಾಮೆರಾ ಪ್ರವೇಶಕ್ಕೆ ಹಣ ಪಾವತಿ ಮಾಡಿದ್ದರೂ, ಸೈಂಟ್ ಮೇರೀಸ್‌ನಲ್ಲಿ ಕ್ಯಾಮೆರಾಕ್ಕೆ ಅವಕಾಶ ಇಲ್ಲ.
ಇನ್ನು ಸೈಂಟ್ ಮೇರೀಸ್ ದ್ವೀಪಕ್ಕೆ ತೆರಳುವ ಬೋಟ್‌ನ ದುಬಾರಿ ದರದ ವಿರುದ್ಧವೂ ಪ್ರವಾಸಿಗ ಆ#ಕ್ರೋಶ ಹೊರ ಹಾಕಿದ್ದಾರೆ. ಒಟ್ಟಾರೆ, ಮಲ್ಪೆ ಮತ್ತು ಸೈಂಟ್ ಮೇರೀಸ್ ಪ್ರವಾಸೀ ತಾಣಗಳಲ್ಲಿ ನಿರ್ವಹಣೆ ವಹಿಸಿಕೊಂಡವರ ಕಾರುಬಾರು ದಿನೇದಿನೇ ಜಾಸ್ತಿಯಾಗುತ್ತಿದೆ. ಇದೀಗ ಸೈಂಟ್ ಮೇರೀಸ್ ದ್ವೀಪದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಮಲ್ಪೆ ಅಭಿವದ್ಧಿ ಸಮಿತಿ ವಿರುದ್ಧ ಆಕ್ರೋಶ ಹೊರಹಾಕಿರುವ ಪ್ರವಾಸಿಗ, ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.