
ಉಚ್ಚಿಲ ತವಕ್ಕಲ್ ಮುಸ್ಲಿಂ ಯಂಗ್ ಮೆನ್ಸ್ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಅಬ್ದುಲ್ ರಝಕ್ ಮೋನಬ್ಬ, ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ ರೆಹ್ಮಾನ್ ಕುಚಿಕಾಡ್ ಆಯ್ಕೆ
Saturday, January 21, 2023
ಉಚ್ಚಿಲ: ಭಾಸ್ಕರ ನಗರದಲ್ಲಿರುವ ತವಕ್ಕಲ್ ಮುಸ್ಲಿಂ ಯಂಗ್ ಮೆನ್ಸ್ ಅಸೋಸಿಯೇಷನ್ ಉಚ್ಚಿಲ ಇದರ ನೂತನ ಅಧ್ಯಕ್ಷರಾಗಿ ಅಬ್ದುಲ್ ರಝಕ್ ಮೋನಬ್ಬ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಅಸೋಸಿಯೇಷನ್'ನ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಗಿದ್ದು, ಇದೇ ವೇಳೆ 2023ಕ್ಕೆ ಇತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಸೋಸಿಯೇಷನ್'ನ ಉಪಾಧ್ಯಕ್ಷರಾಗಿ ಶಫಿ A.K, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರೆಹ್ಮಾನ್ ಕುಚಿಕಾಡ್, ಜೊತೆ ಕಾರ್ಯದರ್ಶಿಯಾಗಿ ಮನ್ಸೂರ್ ಕಟ್ಟಿಂಗೇರಿ, ಕೋಶಾಧಿಕಾರಿಯಾಗಿ ಅಹ್ಮದ್ ಗುಲಾಮ್ ಹಾಗು ಆಡಿಟರ್ ಆಗಿ ಅಬ್ದುಲ್ ರಝಕ್ Y.S ಆಯ್ಕೆಯಾದರು.