ಕಾಂಗ್ರೆಸಿಗೆ ದ್ರೋಹ ಬಗೆದಿರುವ ಪ್ರಮೋದ್ ಮಧ್ವರಾಜ್ ಎಲ್ಲೇ ನಿಂತರೂ ಸೋಲಿಸಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಕರೆ
ಉಡುಪಿ(Headlines Kannada): ಕಾಂಗ್ರೆಸಿಗೆ ದ್ರೋಹ ಬಗೆದಿರುವ ಪ್ರಮೋದ್ ಮಧ್ವರಾಜ್ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಎಲ್ಲೇ ನಿಂತರೂ ಸೋಲಿಸಿ, ಅವರಿಗೆ ತಕ್ಕ ಪಾಠ ಕಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.
ಉಡುಪಿಯಲ್ಲಿ ರವಿವಾರ ನಡೆದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ಪ್ರಮೋದ್ ಮಧ್ವರಾಜ್ ಅವರಿಗೆ ಶಾಸಕ, ಸಚಿವ ಸ್ಥಾನ ಸೇರಿದಂತೆ ಎಲ್ಲವೂ ಕೊಟ್ಟಿದೆ. ಆದರೆ ಇದನ್ನೆಲ್ಲಾ ಮರೆತು ಬಿಜೆಪಿಗೆ ಸೇರುವ ಮೂಲಕ ಕಾಂಗ್ರೆಸಿಗೆ ದ್ರೋಹ ಬಗೆದಿದ್ದಾರೆ. ಅವರಿಗೆ ಈ ಬಾರಿ ತಕ್ಕ ಪಾಠ ಕಲಿಸಿ ಎಂದರು.
ಪ್ರಮೋದ್ ಮಧ್ವರಾಜ್ ಅವರು ಬಿಜೆಪಿ ಸೇರಿರುವ ವೇಳೆ ನಮ್ಮ ಕಾಂಗ್ರೆಸ್ಸಿನ ನಾಯಕರಾಗಲಿ, ಮುಖಂಡರಾಗಲಿ, ಕಾರ್ಯಕರ್ತರಾಗಲಿ ಅವರ ಜೊತೆ ಹೋಗಿಲ್ಲದಿರವುದಕ್ಕೆ ನಿಮಗೆ ಕೋಟಿ ಧನ್ಯವಾದ ಅರ್ಪಿಸುತ್ತಿದ್ದೇನೆ ಎಂದರು.
ಪ್ರಮೋದ್ ಅವರು ಪ್ರಥಮ ಬಾರಿ ಶಾಸಕರಾದರೂ, ಸಚಿವರಾದರು. ಅವರ ತಂದೆ ತಾಯಿ ಎಲ್ಲರನ್ನು ಶಾಸಕ, ಮಂತ್ರಿ ಮಾಡಿದ್ದು ಕಾಂಗ್ರೆಸ್, ಆದರೂ ಅದನ್ನೆಲ್ಲ ಮರೆತು ಕಾಂಗ್ರೆಸಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ ಎಂದ ಡಿಕೆಶಿ, ಅವರಿಗೆ ಬಿಜೆಪಿ ಪಕ್ಷ ಟಿಕೇಟ್ ನೀಡುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಟಿಕೇಟ್ ನೀಡಿದಲ್ಲಿ ಅವರು ಎಲ್ಲೇ ಚುನಾವಣೆಗೆ ನಿಂತರೂ ಕಾರ್ಯಕರ್ತರು ಸೇರಿಕೊಂಡು ಪ್ರಮೋದ್ ಅವರನ್ನು ಸೋಲಿಸಿ ಎಂದು ಕರೆ ನೀಡಿದರು.