ಬಿಜೆಪಿಯ ಹಿಂದುತ್ವ ಅಂದರೆ ಮನುವಾದ, ಮನುಷ್ಯತ್ವದ ವಿರೋಧಿವಾದ; ಬಿಜೆಪಿಯ ದುರುದ್ದೇಶಪೂರಿತವಾದ ಹಿಂದುತ್ವಕ್ಕೆ ಬ#ಲಿಯಾಗಬೇಡಿ: ಕೈಮುಗಿದು ವಿನಂತಿಸಿಕೊಂಡ ಸಿದ್ದರಾಮಯ್ಯ

ಬಿಜೆಪಿಯ ಹಿಂದುತ್ವ ಅಂದರೆ ಮನುವಾದ, ಮನುಷ್ಯತ್ವದ ವಿರೋಧಿವಾದ; ಬಿಜೆಪಿಯ ದುರುದ್ದೇಶಪೂರಿತವಾದ ಹಿಂದುತ್ವಕ್ಕೆ ಬ#ಲಿಯಾಗಬೇಡಿ: ಕೈಮುಗಿದು ವಿನಂತಿಸಿಕೊಂಡ ಸಿದ್ದರಾಮಯ್ಯ

ಉಡುಪಿ(Headlines Kannada): ಬಿಜೆಪಿಯ ಹಿಂದುತ್ವ ಅಂದರೆ ಮನುವಾದ, ಮನುಷ್ಯತ್ವದ ವಿರೋಧಿವಾದಾ. ಕರಾವಳಿಯ ಯುವಕರು ಬಿಜೆಪಿಯ ದುರುದ್ದೇಶಪೂರಿತವಾದ ಹಿಂದುತ್ವಕ್ಕೆ ಬ#ಲಿಯಾಗುತ್ತಿರುವುದು ನೋವಿನ ಸಂಗತಿ. ಇಲ್ಲಿನ ಜನ ದಯವಿಟ್ಟು ಬಿಜೆಪಿಯ ಹಿಂದುತ್ವದ ಬಗ್ಗೆ ಜಾಗೃತರಾಗಿ ಎಂದು ಮಾಜಿ ಮುಖ್ಯಮಂತ್ರಿ,  ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೈಮುಗಿದು ವಿನಂತಿಸಿಕೊಂಡಿದ್ದಾರೆ.

ಉಡುಪಿಯಲ್ಲಿ ರವಿವಾರ ನಡೆದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಬಿಜೆಪಿಯವರು ಹಿಂದೂಗಳ ಪರವಾಗಿರುವವರು ಅಲ್ಲ, ಹಿಂದುತ್ವದ ಪರವಾಗಿರುವವರು. ನಾನು ಅಪ್ಪಟ ಹಿಂದೂ. ನಾವು ಹಿಂದುತ್ವವಾದಿಗಳಲ್ಲ. ಹಿಂದೂ ಧರ್ಮದ ಪರವಾಗಿರುವವರು ಅಂದರೆ ಮನುಷ್ಯತ್ವದ ಪರವಾಗಿರುವವರು ಎಂದು ಅರ್ಥ ಎಂದರು.

ಆರೆಸ್ಸಿನವರ ಮಕ್ಕಳಾಗಲೀ, ಶಾಸಕರ ಮಕ್ಕಳಾಗಲೀ ಕೊ#ಲೆಯಾದ ನಿದರ್ಶನ ಇದೆಯಾ...?

ಇಲ್ಲಿ ಹಿಂದುತ್ವದ ಹೆಸರಿನಲ್ಲಿ ಕೊ#ಲೆಯಾದವರೆಲ್ಲ ಹಿಂದುಳಿದ ಜಾತಿಗೆ ಸೇರಿದವರೇ. ಕೊ#ಲೆಯಾದ ಯಾರಾದರೂ ಕೂಡಾ ಆರೆಸ್ಸಿನ ನಾಯಕರ, ಪ್ರಮುಖ ಕಾರ್ಯಕರ್ತರ ಮಕ್ಕಳಾಗಲೀ, ಶಾಸಕರ ಮಕ್ಕಳಾಗಲೀ ಇರುವ ನಿದರ್ಶನ ಇದೆಯಾ...? ಕೊ#ಲೆ ಮಾಡುವವರು, ಕೊ#ಲೆಯಾದವರು, ಜೈಲಿಗೆ ಹೋಗುವವರು ಹಿಂದುಳಿದ ಜಾತಿಯವರು. ನಾನು ನಿಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ ಇದನ್ನೆಲ್ಲಾ ಕರಾವಳಿ ಭಾಗದ ಯುವಕರು ಅರ್ಥ ಮಾಡಿಕೊಳ್ಳಿ ಎಂದು ವಿನಂತಿಸಿದರು.

ಹೆ#ಣಗಳ ಮೇಲೆ ರಾಜಕೀಯ ಮಾಡುತ್ತಿರುವ ಬಿಜೆಪಿ

ಬಿಜೆಪಿ ಹೆ#ಣಗಳ ಮೇಲೆ ರಾಜಕೀಯ ಮಾಡುತ್ತಿದೆ. ಉತ್ತರ ಕನ್ನಡದ ಪರೇಶ್ ಮೇಸ್ತ ಕೊ#ಲೆಯನ್ನು ರಾಜಕೀಯಕ್ಕೆ ಬಿಜೆಪಿ ಬಳಸಿಕೊಂಡಿತು. ಅದು ಆ#ತ್ಮಹ#ತ್ಯೆ ಆಗಿದ್ದರೂ, ಅದನ್ನು ಒಂದು ಧರ್ಮದವರು ಮಾಡಿದ ಕೊ#ಲೆ ಎಂದು ಬಿಂಬಿಸಿ ಇಲ್ಲಸಲ್ಲದ ಅಪಪ್ರಚಾರ ಮಾಡಿದವರು ಈ ಭಾಗದ ಲೋಕಸಭಾ ಸದಸ್ಯರು. ಇಂಥ ಲೋಕಸಭಾ ಸದಸ್ಯರಾಗಲಿಕ್ಕೆ ಲಾಯಕ್ಕಾ, ನಾಲಾಯಕ್ಕ ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು ಎಂದ ಸಿದ್ದರಾಮಯ್ಯ, ತಾನು ಸಿಎಂ ಆಗಿದ್ದಾಗ ಈ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದೆ. ಈಗ ಅದು ಆ#ತ್ಮಹ#ತ್ಯೆ ಎಂದು ಸಿಬಿಐ ಹೇಳಿದೆ. ಅದು ಕೊ#ಲೆಯಲ್ಲ, ಸಹಜ ಸಾ#ವು ಎಂದು ತನ್ನ ಅಂತಿಮ ವರದಿಯನ್ನು ಕೊಟ್ಟಿದೆ. ಈ ಸಿಬಿಐ ಇರುವುದು ಮೋದಿ, ಅಮಿತ್ ಷಾ ಕೈಕೆಳಗಡೆ. ಈ ವೇಳೆ ಕೊ#ಲೆ ಎಂದು ಹೇಳಿದವರನ್ನು ಏನೆಂದು ಕೇಳಬೇಕು ಎಂದು ಜನರೇ ತೀರ್ಮಾನಿಸಿ ಎಂದರು.  

ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೇ ವಿನಃ ದ್ವೇಷಿಸಬಾರದು. ಯಾವುದೇ ಧರ್ಮದವನಾಗಿರಲಿ, ಜಾತಿಯವನಾಗಿರಲಿ, ನಾವು ಸಮಾನರಾಗಿ ನೋಡಬೇಕು. ಯಾವುದೇ ಧರ್ಮವಾಗಲಿ, ಕೊ#ಲ್ಲು, ಹಿಂ#ಸೆ ಕೊಡು ಎಂದು ಹೇಳುತ್ತಾ...ಬಿಜೆಪಿಯವರು ಹಿಂದುತ್ವ ಎಂದು ಹೇಳಿಕೊಂಡು ಹಿಂ#ಸೆಗೆ ಇಳಿದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. 

Ads on article

Advertise in articles 1

advertising articles 2

Advertise under the article