ಅಬೂಬಕರ್ ಕೈರಂಗಳವರಿಗೆ 'ಗುರುಕುಲ ಜ್ಞಾನ ಸಿಂಧು', ಯು.ಆರ್.ಶೆಟ್ಟಿಯವರಿಗೆ 'ಗುರುಕುಲ ಕಲಾ ಶ್ರೀರತ್ನ' ಪ್ರಶಸ್ತಿ ಪ್ರದಾನ

ಅಬೂಬಕರ್ ಕೈರಂಗಳವರಿಗೆ 'ಗುರುಕುಲ ಜ್ಞಾನ ಸಿಂಧು', ಯು.ಆರ್.ಶೆಟ್ಟಿಯವರಿಗೆ 'ಗುರುಕುಲ ಕಲಾ ಶ್ರೀರತ್ನ' ಪ್ರಶಸ್ತಿ ಪ್ರದಾನ

ಬೆಂಗಳೂರು(Headlines Kannada): ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಸಮಿತಿಯ ಆಶ್ರಯದಲ್ಲಿ ಬೆಂಗಳೂರಿನ ಸ್ಪೂರ್ತಿಧಾಮ ಸಭಾಂಗಣದಲ್ಲಿ  ನಡೆದ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಪ್ರಸಿದ್ಧ ಸಾಹಿತ್ಯ ಸಾಧಕ ಡಿ. ಐ. ಅಬೂಬಕರ್ ಕೈರಂಗಳ  ಹಾಗೂ  

ಕರ್ನಾಟಕ ರಾಜ್ಯ ಕಲಾ ಮತ್ತು ಸಾಂಸ್ಕೃತಿಕ ಸಂಘದ ದ.ಕ. ಜಿಲ್ಲಾ ಅಧ್ಯಕ್ಷರಾದ ಯು. ಆರ್ ಶೆಟ್ಟಿಯವರಿಗೆ  ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಡಿ. ಐ. ಅಬೂಬಕರ್ ಅವರಿಗೆ ಪತ್ರಿಕೋಧ್ಯಮ ಮತ್ತು ಸಾಹಿತ್ಯ ಸಾಧನೆಗಾಗಿ " ಗುರುಕುಲ ಜ್ಞಾನ ಸಿಂಧು"  ಪ್ರಶಸ್ತಿ ಹಾಗೂ ಯು. ಆರ್. ಶೆಟ್ಟಿಯವರಿಗೆ ನಾಟಕ ರಂಗಭೂಮಿಯಲ್ಲಿ ಸಲ್ಲಿಸಿದ ಅಮೋಘ ಸೇವೆಗಾಗಿ " ಗುರುಕುಲ ಕಲಾ ಶ್ರೀರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿರಿಯ ಕವಿ, ಸಾಹಿತಿ ವಿದ್ಯಾವಾಚಸ್ಪತಿ ತುಮಕೂರಿನ ಡಾ.ಕವಿತಾ ಕೃಷ್ಣ ಮೂರ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಖ್ಯಾತ ಜಾನಪದ ಗಾಯಕ ಗುರುರಾಜ ಹೊಸಕೋಟೆ, ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್, ನಿವೃತ್ತ ನ್ಯಾಯಾಧೀಶ ರೇವಣ್ಣ ಬಳ್ಳಾರಿ, ಹಿರಿಯ ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡ ಮುಂತಾದ ಗಣ್ಯರು ಉಪಸ್ಥಿತಿತರಿದ್ದರು. ಗುರುಕುಲ ಕಲಾ ಪ್ರತಿಷ್ಠಾನದ  ಸಂಸ್ಥಾಪಕ  ಹುಲಿಯೂರುದುರ್ಗ ಲಕ್ಷ್ಮಿ ನಾರಾಯಣ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷರಾದ ಡಾ. ಶಿವರಾಜ ಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಶ್ರೀ ನಂದೀಶ್ ಧನ್ಯವಾದವಿತ್ತರು.

Ads on article

Advertise in articles 1

advertising articles 2

Advertise under the article